alex Certify ವಾಟ್ಸಾಪ್ ಲಾಂಚ್ ಮಾಡಿರುವ ಹೊಸ ಫೀಚರ್ ಗಳ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಲಾಂಚ್ ಮಾಡಿರುವ ಹೊಸ ಫೀಚರ್ ಗಳ ಬಗ್ಗೆ ಇಲ್ಲಿದೆ ಮಾಹಿತಿ

ವಾಟ್ಸಾಪ್​ ಕಳೆದ ಕೆಲ ಸಮಯಗಳಿಂದ ಒಂದಾದ ಮೇಲೊಂದರಂತೆ ಬಳಕೆದಾರ ಸ್ನೇಹಿ ಸೌಕರ್ಯಗಳನ್ನ ಒದಗಿಸುತ್ತಲೇ ಬರ್ತಿದೆ. ವಾಟ್ಸಾಪ್​ ಮೇಮೆಂಟ್​, ಶಾಶ್ವತ ಮ್ಯೂಟ್​, ಮೆಸೇಜ್​ ತನ್ನಿಂದ ತಾನೇ ಅಳಿಸಿಹಾಕುವ ಪ್ರಕ್ರಿಯೆ ಹೀಗೆ ಅನೇಕ ಸೇವೆಗಳನ್ನ ನೀಡಿದೆ. ಹಾಗಾದರೆ ಕೇವಲ 2 ತಿಂಗಳಲ್ಲಿ ವಾಟ್ಸಾಪ್​ ಯಾವ್ಯಾವ ಸೌಲಭ್ಯಗಳ ನೀಡಿದೆ ಅನ್ನೋದರ ಸಾರಾಂಶಗಳ ವಿವರ ಇಲ್ಲಿದೆ ನೋಡಿ.

ಕೆಲ ದಿನಗಳ ಹಿಂದಷ್ಟೇ ವಾಟ್ಸಾಪ್​ ನೀಡಿದ ಸೌಕರ್ಯ ಡಿಸಪಿಯರಿಂಗ್​ ಮೆಸೇಜ್​. ಅಂದರೆ ಈ ಬಟನ್​​ನ್ನ ಕ್ಲಿಕ್​ ಮಾಡೋದ್ರಿಂದ ನೀವು ಆಯ್ಕೆ ಮಾಡಿದ ಕಾಂಟ್ಯಾಕ್ಟ್​​ನ ಮೆಸೇಜ್​ಗಳು ಒಂದು ವಾರದಲ್ಲಿ ಡಿಲೀಟ್​ ಆಗಲಿದೆ.

ಅಂದಹಾಗೆ ಈ ಡಿಸಪಿಯರಿಂಗ್​ ಮೆಸೇಜ್​ ಆಯ್ಕೆಯನ್ನ ನೀವು ಗ್ರೂಪ್​ ಚಾಟ್​​ಗಳಿಗೂ ಬಳಕೆ ಮಾಡಬಹುದಾಗಿದೆ. ಇದರಿಂದ ನಿಮ್ಮ ಮೊಬೈಲ್​​ನಲ್ಲಿ ಮೆಮೋರಿ ತುಂಬೋದನ್ನ ನೀವು ತಪ್ಪಿಸಬಹುದಾಗಿದೆ. ನಿಮಗೆ ಬೇಡ ಎನಿಸಿದ್ರೆ ನೀವು ಈ ಆಯ್ಕೆಯನ್ನ ಆಫ್​ ಕೂಡ ಮಾಡಬಹುದಾಗಿದೆ.

ವಾಟ್ಸಾಪ್​ ಪೇಮೆಂಟ್​ ಆಯ್ಕೆ ಕೂಡ ಬಳಕೆದಾರರಿಗೆ ಸಿಕ್ಕಾಪಟ್ಟೆ ಅನುಕೂಲಕರವಾಗಲಿದೆ. 2018ರಿಂದ ಎನ್​ಪಿಸಿಐ ಒಪ್ಪಿಗೆಗಾಗಿ ಕಾದ ವಾಟ್ಸಾಪ್​ ಇದೀಗ ಭಾರತದಲ್ಲಿ ಯಶಸ್ವಿಯಾಗಿ ಲಾಂಚ್​ ಆಗಿದೆ. ನವೆಂಬರ್​ 6ರಂದು ಭಾರತದಲ್ಲಿ ವಾಟ್ಸಾಪ್​ ಪೇ ಲೋಕಾರ್ಪಣೆಗೊಂಡಿದೆ. ಗೂಗಲ್​ ಪೇನಂತೆ ಈ ವಾಟ್ಸಾಪ್​ ಪೇ ಕಾರ್ಯ ನಿರ್ವಹಿಸುತ್ತೆ.

ಕಳೆದ 2 ತಿಂಗಳಲ್ಲಿ ವಾಟ್ಸಾಪ್​ ತಂದ ಮತ್ತೊಂದು ಉತ್ತಮ ಆಯ್ಕೆ ಅಂದರೆ ಶಾಶ್ವತ ಮ್ಯೂಟ್​ ಆಯ್ಕೆ. ಈ ಮೊದಲು ಅಬ್ಬಬ್ಬಾ ಅಂದರೆ ಕೇವಲ 1 ವರ್ಷಗಳ ಕಾಲ ಮಾತ್ರ ಗ್ರೂಪ್​ ಚಾಟ್​ ಇಲ್ಲವೇ ವೈಯಕ್ತಿಕ ಚಾಟ್​ಗಳನ್ನ ಮ್ಯೂಟ್​ ಮಾಡಲು ಅವಕಾಶವಿತ್ತು. ಆದರೆ ಈಗ ಶಾಶ್ವತವಾಗಿ ಯಾರನ್ನ ಬೇಕಿದ್ದರೂ ಮ್ಯೂಟ್​ ಮಾಡಬಹುದಾಗಿದೆ. ಈ ಮೂಲಕ ಕಿರಿಕಿರಿ ಎನ್ನಿಸುವ ಗ್ರೂಪ್​​ಗಳ ಕಾಟದಿಂದ ಕೊಂಚ ಬಚಾವಾಗಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...