alex Certify ಜಿಯೋ, ಏರ್ಟೆಲ್ ಸೇರಿ ಟೆಲಿಕಾಂ ಕಂಪನಿಗಳಿಂದ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ, ಏರ್ಟೆಲ್ ಸೇರಿ ಟೆಲಿಕಾಂ ಕಂಪನಿಗಳಿಂದ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಲಾಕ್ ಡೌನ್ ಜಾರಿ ಮಾಡಿರುವುದರಿಂದ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಹಲವು ಟೆಲಿಕಾಂ ಕಂಪನಿಗಳು ಮುಂದಾಗಿವೆ.

ಮೇ 3 ರವರೆಗೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಟೆಲಿಕಾಂ ಕಂಪನಿಗಳು ಗ್ರಾಹಕರ ನೆರವಿಗೆ ಮುಂದಾಗಿದ್ದು ಪ್ರಿಪೇಯ್ಡ್ ಸೇವೆಯನ್ನು ಮೇ 3 ರವರೆಗೂ ವಿಸ್ತರಿಸಲು ಮುಂದಾಗಿವೆ. ಪ್ರಸ್ತುತ ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಕಡಿಮೆ ಆದಾಯ ಹೊಂದಿದ ಗ್ರಾಹಕರು ಮತ್ತು ಎಲ್ಲರಿಗೂ ಈ ಸೇವೆ ನೆರವಾಗಲಿದೆ ಎಂದು ರಿಲಯನ್ಸ್ ಜಿಯೋ ತಿಳಿಸಿದೆ.

ಅದೇ ರೀತಿ ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು ಕೂಡ ರಿಚಾರ್ಜ್ ಅವಧಿಯನ್ನು ವಿಸ್ತರಣೆ ಮಾಡಿವೆ. ಸುಮಾರು ಮೂರು ಕೋಟಿಯಷ್ಟು ಗ್ರಾಹಕರಿಗೆ ಲಾಕ್ ಡೌನ್ ಅವಧಿಯಲ್ಲಿ ರಿಚಾರ್ಜ್ ಮಾಡಿಸಲು ಸಾಧ್ಯವಾಗುವುದಿಲ್ಲ. ಅಂತಹ ಗ್ರಾಹಕರಿಗೆ ಮೇ 3 ರವರೆಗೂ ಸೇವೆ ಮುಂದುವರಿಯಲಿದೆ ಎಂದು ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ಟೆಲ್ ತಿಳಿಸಿದೆ.

ಲಾಕ್ಡೌನ್ ಹಿನ್ನೆಲೆಯಲ್ಲಿ ಗ್ರಾಹಕರ ನೆರವಿಗೆ ಟೆಲಿಕಾಂ ಕಂಪನಿಗಳು ಮುಂದಾಗಿದ್ದು, ಪ್ರಿಪೇಯ್ಡ್ ಅವಧಿಯನ್ನು ಮೇ 3 ರವರೆಗೂ ವಿಸ್ತರಿಸಲಿವೆ. ಪ್ರಿಪೇಯ್ಡ್ ಅವಧಿ ಪೂರ್ಣಗೊಂಡ ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...