alex Certify ಏರ್ಟೆಲ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್ಟೆಲ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಏರ್ಟೆಲ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. 2020 ರ ಏಪ್ರಿಲ್ ತಿಂಗಳ ಮೊಬೈಲ್ ನೆಟ್ವರ್ಕ್ ಎಕ್ಸ್ ಪಿರಿಯನ್ಸ್ ವರದಿ ಬಂದಿದ್ದು ಅತ್ಯುತ್ತಮ ಸೇವೆ ನೀಡುತ್ತಿರುವ ನೆಟ್ವರ್ಕ್ ಎಂಬ ಹೆಗ್ಗಳಿಕೆಗೆ ಏರ್ಟೆಲ್ ಪಾತ್ರವಾಗಿದೆ.

ಗ್ರಾಹಕರ ಮೊಬೈಲ್ ಬಳಕೆ ಅನುಭವ ವಿಶ್ಲೇಷಿಸುವ ಓಪನ್ ಸಿಗ್ನಲ್ ಜಾಗತಿಕ ಕಂಪನಿ ಬಿಡುಗಡೆ ಮಾಡಿರುವ ವರದಿಯಲ್ಲಿ ಏರ್ಟೆಲ್ ಅತ್ಯುತ್ತಮ ಸೇವೆ ನೀಡುವುದರಲ್ಲಿ ಮುಂದಿದೆ ಎಂದು ಹೇಳಲಾಗಿದೆ.

ವಿಡಿಯೋ ಮತ್ತು ಮೊಬೈಲ್ ಎಕ್ಸ್ ಪಿರಿಯನ್ಸ್ ನಲ್ಲಿ ಏರ್ಟೆಲ್ ಅತ್ಯುತ್ತಮ ಸೇವೆ ನೀಡುವ ಕಂಪನಿಯಾಗಿದೆ. ಲಾಕ್ಡೌನ್ ಜಾರಿಯಾಗಿರುವುದರಿಂದ ಮನೆಯಲ್ಲಿರುವ ಹೆಚ್ಚಿನ ಜನ ಮೊಬೈಲ್ ಮೇಲೆಯೇ ಅವಲಂಬಿತರಾಗಿದ್ದಾರೆ. ಇದರಿಂದಾಗಿ ಇಂಟರ್ನೆಟ್ ಬೇಡಿಕೆ ಹೆಚ್ಚಾಗಿದೆ. ಮೊಬೈಲ್ ನಲ್ಲಿ ವಿಡಿಯೋ ಮತ್ತು ಆಡಿಯೋ ಸರಾಗವಾಗಿ ಇರಬೇಕೆಂದು ಗ್ರಾಹಕರು ಬಯಸುತ್ತಾರೆ. ಇಂತಹ ವೇಳೆ ಏರ್ಟೆಲ್ ಸರ್ವಿಸ್ ಉತ್ತಮಗೊಳಿಸಿ ಕಳೆದ ತಿಂಗಳಿಗಿಂತಲೂ ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಡೌನ್ಲೋಡ್, ವಿಡಿಯೋ ಮೊದಲಾದ ಸೇವೆಗಳು ಗುಣಮಟ್ಟದಿಂದ ಕೂಡಿದ್ದು ಬೇರೆ ಸ್ಪರ್ಧಿಗಳನ್ನು ಏರ್ಟೆಲ್ ಹಿಂದಿಕ್ಕಿದೆ. ಗ್ರಾಹಕರನ್ನು ತೃಪ್ತಿಪಡಿಸುವಲ್ಲಿ ಕಾರ್ಯಪ್ರವೃತ್ತರಾಗಿರುವ ಏರ್ಟೆಲ್ ಎಲ್ಲ ಮೊಬೈಲ್ ನೆಟ್ವರ್ಕ್ ಗಳಲ್ಲಿ ರಿಯಲ್ ಟೈಮ್ ಕಮ್ಯುನಿಕೇಶನ್ ಮತ್ತು ಗೇಮಿಂಗ್ ಅಪ್ಲಿಕೇಶನ್ ಬಳಕೆ ಆಧಾರದ ಮೇಲೆ ಪರಿಗಣಿಸಲಾದ ಸೇವೆಯಲ್ಲಿ ಮೊದಲ ಸ್ಥಾನದಲ್ಲಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...