alex Certify ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: ಡೇಟಾ, ಕರೆ ದರ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್: ಡೇಟಾ, ಕರೆ ದರ ಏರಿಕೆ

ನವದೆಹಲಿ: ಮೊಬೈಲ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕರೆ ಮತ್ತು ಡೇಟಾ ದರ ದುಬಾರಿಯಾಗಲಿದೆ. ಈಗಾಗಲೇ ಏರ್ಟೆಲ್ ನಿಂದ ಶೇಕಡ 20 ರಿಂದ 25 ರಷ್ಟು ದರ ಏರಿಕೆ ಮಾಡಲಾಗಿದ್ದು, ವೊಡಾಫೋನ್ ನಿಂದಲೂ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ನವೆಂಬರ್ 26 ರಿಂದ ಜಾರಿಗೆ ಬರುವಂತೆ ಏರ್ ಟೆಲ್ ಕರೆ ದರವನ್ನು ಶೇಕಡ 25 ರಷ್ಟು ಹೆಚ್ಚಳ ಮಾಡಲಾಗಿದೆ. ಅನಿಯಮಿತ ಕರೆ ಮತ್ತು ಡೇಟಾವನ್ನು ಶೇಕಡ 20 ರಷ್ಟು ಹೆಚ್ಚಳ ಮಾಡಲಾಗಿದೆ.

ಹಾಲಿ 79 ರೂಪಾಯಿ ಇದ್ದ ಪ್ಲಾನ್ 99 ರೂ.ಗೆ ಏರಿಕೆಯಾಗಲಿದೆ. 149 ಪ್ಲಾನ್ 179 ರೂ., 98 ರೂ. ಪ್ಲಾನ್ 118 ರೂ.ಗೆ, 2498 ರೂ. ಪ್ಲಾನ್ 2999 ರೂ.ಗೆ ಏರಿಕೆಯಾಗಿದೆ. ಏರ್ಟೆಲ್ ಬಳಿಕ ವೊಡಾಫೋನ್ ಐಡಿಯಾ ಸೇರಿ ಉಳಿದ ಕಂಪನಿಗಳು ಕೂಡ ಡೇಟಾ ಮತ್ತು ಕರೆ ದರ ಏರಿಕೆ ಮಾಡುವ ಸಾಧ್ಯತೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...