alex Certify ವಾಟ್ಸಾಪ್ ಜೊತೆ ಜಿಯೋ ಮಾರ್ಟ್ ಮಾಡಲಿದೆ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಜೊತೆ ಜಿಯೋ ಮಾರ್ಟ್ ಮಾಡಲಿದೆ ಕೆಲಸ

Reliance Jio-Facebook deal: JioMart, WhatsApp to operate together ...

ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋ ಜೊತೆ ದೊಡ್ಡ ಹೂಡಿಕೆ ಮಾಡಿರುವುದಾಗಿ  ಸಾಮಾಜಿಕ ಜಾಲತಾಣ ಫೇಸ್ಬುಕ್ ಹೇಳಿದೆ. ಇದ್ರ ಜೊತೆ ಜಿಯೋ ಫ್ಲಾಟ್ಫಾರ್ಮ್, ರಿಲಾಯನ್ಸ್ ರಿಟೇಲ್, ಫೇಸ್ಬುಕ್ ಮೆಸ್ಸೇಜಿಂಗ್ ಅಪ್ಲಿಕೇಷನ್, ವಾಟ್ಸಾಪ್ ನ ಮಧ್ಯೆ ವಾಣಿಜ್ಯ ಸಹಭಾಗಿತ್ವವನ್ನು ನಿರ್ಧರಿಸಲಾಗಿದೆ.

ಈ ಒಪ್ಪಂದದ ಪ್ರಕಾರ, ಫೇಸ್ಬುಕ್ ಜಿಯೋದ ಶೇಕಡಾ 9.99ರಷ್ಟು ಪಾಲನ್ನು 43,574 ಕೋಟಿ ರೂಪಾಯಿಗೆ ಖರೀದಿಸಿದೆ. ಈ ಒಪ್ಪಂದವು ಭಾರತದಲ್ಲಿ ಚಿಲ್ಲರೆ ವ್ಯಾಪಾರ ಶಾಪಿಂಗ್ ವಿಧಾನವನ್ನು ಬದಲಾಯಿಸಲಿದೆ.

ರಿಲಯನ್ಸ್ ನ ಜಿಯೋ ಮಾರ್ಟ್  ಮತ್ತು ಫೇಸ್ಬುಕ್‌ನ ವಾಟ್ಸಾಪ್ ದೇಶದ ಕೋಟ್ಯಾಂತರ ಕಿರಾಣಿ ಅಂಗಡಿಗಳು ಮತ್ತು ಗ್ರಾಹಕರನ್ನು ಸಂಪರ್ಕಿಸಲು ತಯಾರಿ ನಡೆಸುತ್ತಿದೆ. ಈಗಾಗಲೇ ಈ ವ್ಯವಹಾರದಲ್ಲಿ ತೊಡಗಿರುವ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಿಗೆ ರಿಲಯನ್ಸ್ ರಿಟೇಲ್ ಕಠಿಣ ಸ್ಪರ್ಧೆಯನ್ನು ನೀಡಲಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬುಧವಾರ ಈ ಬಗ್ಗೆ ಹೇಳಿಕೆ ನೀಡಿದೆ. ವಾಟ್ಸಾಪ್ ನೊಂದಿಗಿನ ಜಿಯೋಮಾರ್ಟ್  ವ್ಯವಹಾರವನ್ನು ಮುಂದುವರಿಸಲಿದೆ. ಮೆಸೆಂಜರ್‌ನಲ್ಲಿ ಸಣ್ಣ ಉದ್ಯಮಿಗಳನ್ನು ಸಂಪರ್ಕಿಸಲು ನಿರ್ಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...