alex Certify ‘ವರ್ಕ್ ಫ್ರಂ ಹೋಂ’ ಡ್ರೆಸ್ ಕೋಡ್ ವಿಡಿಯೋ ಹಾಕಿದ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವರ್ಕ್ ಫ್ರಂ ಹೋಂ’ ಡ್ರೆಸ್ ಕೋಡ್ ವಿಡಿಯೋ ಹಾಕಿದ ಉದ್ಯಮಿ

ಕರೋನಾ‌ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ವರ್ಕ್ ಫ್ರಂ ಹೋಂ ಘೋಷಿಸಿವೆ.‌ ಅದರ ಸಾಧಕ ಬಾಧಕಗಳ ಕುರಿತಾದ ಮೋಜಿನ ವಿಡಿಯೋಗಳು ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ವಿದೇಶಿ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿದ್ದು, ಕೆಲವೇ ಕ್ಷಣದಲ್ಲಿ ಕಾರ್ಪೊರೇಟ್ ವಿಡಿಯೋ ಕಾನ್ಫರೆನ್ಸ್ ಮಿಟಿಂಗ್ ಗೆ ಸಿದ್ಧವಾಗುವ ಪರಿಯ ವಿಡಿಯೋವೊಂದನ್ನು ಉದ್ಯಮಿ ಆನಂದ ಮಹಿಂದ್ರಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಟಿ ಶರ್ಟ್ ಹಾಕಿ ಕುಳಿತು ಟಿವಿ ನೋಡುವ ಉದ್ಯಮಿ ಮೀಟಿಂಗ್ ಅಲಾರ್ಮ್ ಹೊಡೆದ ಎರಡೇ ಕ್ಷಣದಲ್ಲಿ ಸೂಟ್ ಹಾಕಿ ಮೀಟಿಂಗ್ ಗೆ ಸಿದ್ಧವಾಗುತ್ತಾನೆ. ಅದು ಹೇಗೆ ಎಂಬ ಅಚ್ಚರಿಯ ಅಂಶವನ್ನು ವಿಡಿಯೋ ತಿಳಿಸಿದೆ.

ಇದಕ್ಕೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಕಾರ್ಪೋರೆಟ್ ಉದ್ಯೋಗಿ ಮೀಟಿಂಗ್ ನಲ್ಲಿ ವಿಡಿಯೋಗೆ ಕಾಣುವ ತನ್ನ ಅರ್ಧ ದೇಹ ಮಾತ್ರ ಮುಚ್ಚುವ ಸೂಟ್ ಸಿದ್ಧ ಮಾಡಿಟ್ಟುಕೊಂಡಿರುತ್ತಾನೆ. ಅಲ್ಲದೆ ಹಿನ್ನೆಲೆಯಲ್ಲಿ ಮನೆಯ ಸನ್ನಿವೇಷ ಕಾಣಬಾರದು ಎಂಬ ಕಾರಣಕ್ಕೆ ಲೈಬ್ರರಿ ಚಿತ್ರ ಇಡುತ್ತಾನೆ. ” ವಿಶ್ವದೆಲ್ಲೆಡೆ ಗೀಳು ಸೃಷ್ಟಿಸಿದ ವಿಡಿಯೋ ಕಾನ್ಫರೆನ್ಸ್ ನ ಹೊಸ ಡ್ರೆಸ್ ಕೋಡ್ ನೋಡಿದೆ” ಎಂದು ಮಹಿಂದ್ರಾ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...