alex Certify ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಜುಲೈನಿಂದ ಹೆಚ್ಚಾಗಲಿದೆ ಸಂಬಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ..! ಜುಲೈನಿಂದ ಹೆಚ್ಚಾಗಲಿದೆ ಸಂಬಳ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಕೇಂದ್ರ ನೌಕರರ ಪ್ರಿಯ ಭತ್ಯೆ ಜುಲೈ 1 ರಿಂದ ಏರಿಕೆಯಾಗಲಿದೆ. ನೌಕರರ ಪ್ರಿಯ ಭತ್ಯೆ ಶೇಕಡಾ 28ರಷ್ಟಾಗಲಿದೆ. ಈ ಏರಿಕೆ ವೇತನದ ಹೆಚ್ಚಳದೊಂದಿಗೆ ಸಿಗಲಿದೆ.

ಇದಲ್ಲದೆ ನೌಕರರಿಗೆ ಇನ್ನೊಂದು ಒಳ್ಳೆ ಸುದ್ದಿಯಿದೆ. ಮುಂದೂಡಲಾಗಿದ್ದ ಮೂರು ಕಂತುಗಳನ್ನು ಸಹ ನೀಡಲಾಗುವುದು. ಸದ್ಯ ಶೇಕಡಾ 11ರ ದರದಲ್ಲಿ ಡಿಎ ನೀಡಲಾಗುವುದು. ಇನ್ಮುಂದೆ ಅದನ್ನು 28 ಕ್ಕೆ ಹೆಚ್ಚಿಸಲಾಗಿದೆ. ಈ ಏರಿಕೆ ನಂತ್ರ ನೌಕರರ ವೇತನದಲ್ಲಿ ಭಾರಿ ಏರಿಕೆ ಕಂಡುಬರಲಿದೆ. ನೌಕರರು ಎರಡು ವರ್ಷಗಳ ಡಿಎ ಲಾಭವನ್ನು ನೇರವಾಗಿ ಪಡೆಯಲಿದ್ದಾರೆ.

2020 ರ ಜನವರಿಯಲ್ಲಿ ಕೇಂದ್ರ ನೌಕರರ ಪ್ರಿಯ ಭತ್ಯೆ ಶೇಕಡಾ 4 ರಷ್ಟು ಹೆಚ್ಚಾಗಿದೆ. ದ್ವಿತೀಯಾರ್ಧದಲ್ಲಿ ಶೇಕಡಾ 3 ರಷ್ಟು ಹೆಚ್ಚಳವಾಗಿದೆ. ಆದ್ರೆ ಈ ಹೆಚ್ಚಳದ ಹಣ ಇನ್ನೂ ನೌಕರರಿಗೆ ಸಿಕ್ಕಿಲ್ಲ. ಕೇಂದ್ರ ನೌಕರರ ಕನಿಷ್ಠ ವೇತನ 18000 ರೂಪಾಯಿ. ಶೇಕಡಾ 15ರಷ್ಟು ಪ್ರಿಯ ಭತ್ಯೆಯನ್ನು ಸೇರಿಸುವ ನಿರೀಕ್ಷೆಯಿದೆ. ಅಂದ್ರೆ ತಿಂಗಳಿಗೆ 2700 ರೂಪಾಯಿ ವೇತನ ಸಿಗಲಿದೆ. ವಾರ್ಷಿಕವಾಗಿ ನೋಡಿದ್ರೆ ಒಟ್ಟು ಪ್ರಿಯ ಭತ್ಯೆ 32400 ರೂಪಾಯಿಯಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...