alex Certify ಗಣಿಯಲ್ಲಿತ್ತು ಬರೋಬ್ಬರಿ 378 ಕ್ಯಾರೆಟ್ ವಜ್ರ, ದಂಗಾಗುವಂತಿದೆ ಇದ್ರ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಿಯಲ್ಲಿತ್ತು ಬರೋಬ್ಬರಿ 378 ಕ್ಯಾರೆಟ್ ವಜ್ರ, ದಂಗಾಗುವಂತಿದೆ ಇದ್ರ ಬೆಲೆ

ದಕ್ಷಿಣ ಆಫ್ರಿಕಾದ ಬೋಟ್ಸ್ವಾನಾದಲ್ಲಿ ಬರೋಬ್ಬರಿ 378 ಕ್ಯಾರೆಟ್ ಬಿಳಿ ವಜ್ರ ಕಂಡುಬಂದಿದೆ. ವಜ್ರವನ್ನು ಶೋಧಿಸಿದ ಕಂಪನಿ ಇದು ಅದ್ಭುತ ಮತ್ತು ಭವ್ಯವಾದ ವಜ್ರ ಎಂದು ಬಣ್ಣಿಸಿದೆ.

ಅಂದ ಹಾಗೆ, ಜನವರಿ 15 ರಂದು ಕೆನಡಾ ವ್ಯಾಂಕೋವರ್ ಮೂಲದ ಕಂಪನಿ ಈ ವಜ್ರವನ್ನು ಶೋಧಿಸಿದೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದ್ದು, ವಜ್ರವನ್ನು 341 ಕ್ಯಾರೆಟ್ ಟಾಪ್ ವೈಟ್ ಜೆಮ್ ಕ್ವಾಲಿಟಿ ಡೈಮಂಡ್ ಆಗಿ ಪರಿವರ್ತಿಸಿದಾಗ ಇದರ ಮೌಲ್ಯ 15 ಮಿಲಿಯನ್ ಡಾಲರ್(ಅಂದಾಜು 110 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ.

2012 ರಲ್ಲಿ ಕಂಪನಿ ಈ ಗಣಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಓಪನ್-ಪಿಟ್ ಕರೋವ್ ಮೈನ್‌ನಿಂದ 200 ಕ್ಯಾರೆಟ್‌ಗಳಿಗಿಂತ ಹೆಚ್ಚಿನದಾದ 55 ನೇ ವಜ್ರ ಇದಾಗಿದೆ. 300 ಕ್ಯಾರೆಟ್ ಗಿಂತ ಹೆಚ್ಚಿನದಾದ ಎರಡನೇ ವಜ್ರವಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...