alex Certify BIG NEWS: ಹೂಡಿಕೆ ಹಣ ಡಬಲ್ ಆಗ್ಬೇಕೆಂದ್ರೆ ಈ ಯೋಜನೆ ಬೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಹೂಡಿಕೆ ಹಣ ಡಬಲ್ ಆಗ್ಬೇಕೆಂದ್ರೆ ಈ ಯೋಜನೆ ಬೆಸ್ಟ್

ಇಂದಿನ ದಿನಗಳಲ್ಲಿ ಹೂಡಿಕೆ ಅನಿವಾರ್ಯವಾಗಿದೆ. ಹೂಡಿಕೆ ಮಾಡುವ ವೇಳೆ ಆಲೋಚನೆ ಮಾಡಿ ಹೆಚ್ಚಿನ ಲಾಭ ನೀಡುವ ಹಾಗೂ ಸುರಕ್ಷಿತ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಂಪ್ರದಾಯಿಕ ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಅಂಚೆ ಕಚೇರಿ ಉತ್ತಮ ಆಯ್ಕೆ.

ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಹೂಡಿಕೆಗೆ ಉತ್ತಮ ಯೋಜನೆಯಾಗಿದೆ. ಈ ಯೋಜನೆ ಮುಕ್ತಾಯದ ನಂತ್ರ ಹೂಡಿಕೆದಾರನಿಗೆ ಡಬಲ್ ಮೊತ್ತ ಸಿಗುತ್ತದೆ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಶೇಕಡಾ 6.9ರಷ್ಟು ಬಡ್ಡಿ ಸಿಗುತ್ತದೆ. ಹೂಡಿಕೆ ಮಾಡಿದ ಹಣ 124 ತಿಂಗಳಲ್ಲಿ ಡಬಲ್ ಆಗುತ್ತದೆ.

ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಕನಿಷ್ಠ ಸಾವಿರ ರೂಪಾಯಿ ಹೂಡಿಕೆ ಮಾಡಬೇಕು. ಆದ್ರೆ ಗರಿಷ್ಠ ಮಿತಿಯಿಲ್ಲ. ಕಿಸಾನ್ ವಿಕಾಸ್ ಪತ್ರವನ್ನು ವಯಸ್ಕ ಖರೀದಿ ಮಾಡಬಹುದು. ಜಂಟಿ ಎ ಖಾತೆಯಲ್ಲಿ ಮೂವರು ಖರೀದಿಸಬಹುದು. ಜಂಟಿ ಬಿ ಖಾತೆಯಲ್ಲಿ ಕೂಡ ಮೂವರು ವಯಸ್ಕರಿರಬಹುದು. 10 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಇದನ್ನು ಖರೀದಿ ಮಾಡಬಹುದು. ಅಪ್ರಾಪ್ತರ ಹೆಸರಿನಲ್ಲಿ ವಯಸ್ಕ ಖರೀದಿ ಮಾಡಬಹುದು.

ಕಿಸಾನ್ ವಿಕಾಸ್ ಪತ್ರವನ್ನು ಪಾಸ್ಬುಕ್ ರೂಪದಲ್ಲಿ ನೀಡಲಾಗುತ್ತದೆ. ಯಾವುದೇ ಅಂಚೆ ಕಚೇರಿಯಲ್ಲಿ ನೀವು ಇದನ್ನು ಖರೀದಿ ಮಾಡಬಹುದಾಗಿದೆ. ಕೆವಿಪಿ ಪ್ರಮಾಣ ಪತ್ರವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಮತ್ತು ಒಂದು ಅಂಚೆ ಕಚೇರಿಯಿಂದ ಇನ್ನೊಂದು ಕಚೇರಿಗೆ ವರ್ಗಾಯಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...