ಬೇಕಾಗುವ ಸಾಮಾಗ್ರಿಗಳು: ಅಕ್ಕಿ (ಕಜ್ಜಾಯ ಅಕ್ಕಿ/ ದೋಸೆ ಅಕ್ಕಿ/ರೇಷನ್ ಅಕ್ಕಿ) – ಒಂದು ಕಪ್, ಬೆಲ್ಲ- ಮುಕ್ಕಾಲು ಕಪ್, ಏಲಕ್ಕಿ- ಸ್ವಲ್ಪ, ಬಿಳಿ ಎಳ್ಳು/ಕಪ್ಪು ಎಳ್ಳು- 1 ಟೀ ಸ್ಪೂನ್, ತುಪ್ಪ- 1 ಟೀ ಸ್ಪೂನ್, ಕರಿಯಲು ಎಣ್ಣೆ.
ಹಬ್ಬಕ್ಕೆ ಮಾಡಿ ಈ ಸಿಹಿತಿಂಡಿ
ಮಾಡುವ ವಿಧಾನ: ಒಂದು ಕಪ್ ಅಕ್ಕಿಯನ್ನು ತೊಳೆದು 7 ರಿಂದ 8 ಗಂಟೆ ನೆನೆಸಿಡಿ. ಕಾಟನ್ ಬಟ್ಟೆಯಲ್ಲಿ ನೆನೆಸಿದ ಅಕ್ಕಿಯನ್ನು ಆರಿಸಲು ಹಾಕಿ. ಅರ್ಧ ಗಂಟೆ ಆರಿಹಾಕಿದ್ರೆ ಸಾಕು. ತೇವಾಂಶ ಸ್ವಲ್ಪ ಹಾಗೇ ಇರಬೇಕು. ಬಳಿಕ ಮಿಕ್ಸಿ ಜಾರಿಗೆ ಹಾಕಿ ಚಿರೋಟಿ ರವೆ ತರಹ ಪುಡಿ ಮಾಡಬೇಕು.
ಈ ಅಕ್ಕಿ ಹಿಟ್ಟಿಗೆ ಎಳ್ಳು, ಏಲಕ್ಕಿ ಹಾಕಿ ಮಿಕ್ಸ್ ಮಾಡಿ. ನಂತರ ಇನ್ನೊಂದು ಬಾಣಲೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಕರಗಿಸಿ. ಬೆಲ್ಲ ಒಂದೆಳೆ ಪಾಕ ಬಂದಾಗ ಅಕ್ಕಿಹಿಟ್ಟು ಇದಕ್ಕೆ ಮಿಕ್ಸ್ ಮಾಡಿ. ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಸ್ಟೌ ಆಫ್ ಮಾಡಿ. ಈ ಪಾಕ ಆರಿದ ನಂತರ ತುಪ್ಪ ಹಚ್ಚಿಟ್ಟು ಎತ್ತಿಡಿ. 7ರಿಂದ 8 ಗಂಟೆಗಳ ನಂತರ ಉಂಡೆ ಮಾಡಿ ನಂತರ ಕೈಯಲ್ಲಿ ತಟ್ಟಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಚೆನ್ನಾಗಿ ಕರಿದ ನಂತರ ಸರ್ವಿಂಗ್ ಪ್ಲೇಟ್ ಗೆ ಎತ್ತಿಟ್ಟರೆ ಸವಿಯಲು ರುಚಿಯಾದ ಕಜ್ಜಾಯ ರೆಡಿ.