alex Certify ಲಾಕ್ ಡೌನ್ ಎಫೆಕ್ಟ್: ಆನ್ ಲೈನ್ ವಹಿವಾಟಿನಲ್ಲಿ ಭಾರಿ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಎಫೆಕ್ಟ್: ಆನ್ ಲೈನ್ ವಹಿವಾಟಿನಲ್ಲಿ ಭಾರಿ ಹೆಚ್ಚಳ

ದೇಶದಲ್ಲಿ ಕರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿರುವ ಕಾರಣ ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಇದರ ಪರಿಣಾಮ ಜನಜೀವನ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಅಂಗಡಿ – ಮುಂಗಟ್ಟುಗಳು ಬಂದ್ ಆಗಿರುವುದರಿಂದ ಆರ್ಥಿಕ ಚಟುವಟಿಕೆಯೂ ಬಹುತೇಕ ಸ್ಥಗಿತಗೊಂಡಿದೆ.

ಇದರ ಮಧ್ಯೆ ಲಾಕ್ ಡೌನ್ ನಿಂದಾಗಿ ಡಿಜಿಟಲ್ ವಹಿವಾಟಿನಲ್ಲಿ ಭಾರಿ ಹೆಚ್ಚಳವಾಗಿರುವುದು ಕಂಡುಬಂದಿದೆ. ಸಾರ್ವಜನಿಕರು ತಮ್ಮ ವಹಿವಾಟು ಪೂರ್ಣಗೊಳಿಸಲು ಆನ್ಲೈನ್ ಪೇಮೆಂಟ್ ಮೊರೆ ಹೋಗಿದ್ದಾರೆ. ಕಳೆದ 1ತಿಂಗಳಿನಿಂದ ಆನ್ಲೈನ್ ವಹಿವಾಟಿನಲ್ಲಿ ಶೇಕಡಾ 50ಕ್ಕೂ ಅಧಿಕ ಹೆಚ್ಚಳವಾಗಿದೆ ಎನ್ನಲಾಗಿದೆ.

ಮೊಬೈಲ್ ರೀಚಾರ್ಜ್, ವಿದ್ಯುತ್ ಶುಲ್ಕ ಪಾವತಿ, ಕೇಬಲ್ ಶುಲ್ಕ ಸೇರಿದಂತೆ ಹಲವು ವಿಧದ ಸೇವೆಗಳಿಗೆ ಆನ್ಲೈನ್ ಮೂಲಕವೇ ಪಾವತಿಯಾಗುತ್ತಿದ್ದು, ಇದಕ್ಕಾಗಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮೊದಲಾದ ವಿಧಾನಗಳು ಬಳಕೆಯಾಗುತ್ತಿವೆ. ಗ್ರಾಹಕರು ಅಗತ್ಯ ಬಿದ್ದರೆ ಮಾತ್ರ ಬ್ಯಾಂಕ್ ಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...