alex Certify ರಿಲಾಯನ್ಸ್ ‘ಜಿಯೋ’ ಧಮಾಲ್ ಪ್ಯಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಾಯನ್ಸ್ ‘ಜಿಯೋ’ ಧಮಾಲ್ ಪ್ಯಾಕ್

ರಿಲಯನ್ಸ್ ಜಿಯೋ ತನ್ನ ಎಲ್ಲ ಗ್ರಾಹಕರಿಗೆ ವಿಭಿನ್ನ ಯೋಜನೆಗಳನ್ನು ನೀಡ್ತಿದೆ. ಕಂಪನಿ ಇತ್ತೀಚೆಗೆ 401 ರೂಪಾಯಿ, 2,599 ರೂಪಾಯಿ ಮತ್ತು 2,399 ರೂಪಾಯಿಗಳ ಪ್ರಿಪೇಯ್ಡ್ ಪ್ಯಾಕ್ ಬಿಡುಗಡೆ ಮಾಡಿದೆ. ಇದ್ರ ವಿವರ ಇಲ್ಲಿದೆ.

ಜಿಯೋ ಡೇಟಾ ಆಡ್ ಆನ್ ಪ್ಯಾಕ್ ಬೆಲೆ 1,208 ರೂಪಾಯಿ. ಈ ಪ್ಯಾಕ್‌ನ ಸಿಂಧುತ್ವ 240 ದಿನಗಳು. ಈ ಪ್ಯಾಕ್‌ನಲ್ಲಿ ಒಟ್ಟು 240 ಜಿಬಿ ಹೈಸ್ಪೀಡ್ ಡೇಟಾ ಲಭ್ಯವಿದೆ. ಪ್ರತಿದಿನ 30 ಜಿಬಿ ಡೇಟಾ ಲಭ್ಯವಿದೆ. ಇದರ ನಂತರ ಡೇಟಾ ವೇಗ 64 ಕೆಬಿಪಿಎಸ್‌ಗೆ ಇಳಿಯಲಿದೆ. ಎಸ್ಎಂಎಸ್ ಲಭ್ಯವಿಲ್ಲ.

ಜಿಯೋ ಡಾಟಾ ಆಡ್ ಆನ್ ಪ್ಯಾಕ್ 1,206 ರೂಪಾಯಿ ಬೆಲೆಯು 180 ದಿನಗಳ ಸಿಂಧುತ್ವ ಹೊಂದಿದೆ. ಇದು ಒಟ್ಟು 240 ಜಿಬಿ ಡೇಟಾವನ್ನು ನೀಡುತ್ತದೆ. ಈ ಪ್ಯಾಕ್‌ನಲ್ಲಿ ಉಚಿತವಾಗಿ ಜಿಯೋ ಅಪ್ಲಿಕೇಶನ್‌ ಸಿಗಲಿದೆ.

ಜಿಯೋ ಡೇಟಾ ಆಡ್ ಆನ್ ಪ್ಯಾಕ್ 1,004 ರೂಪಾಯಿ ಪ್ಯಾಕ್ 120 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಯಾಕ್‌ ನಲ್ಲಿ ಒಟ್ಟು 200 ಜಿಬಿ ಡೇಟಾ ಲಭ್ಯವಿದೆ. 1 ವರ್ಷಕ್ಕೆ 399 ರೂಪಾಯಿ ಬೆಲೆಯ ಉಚಿತ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...