alex Certify ಯುಟ್ಯೂಬ್ ಬಳಕೆದಾರರಿಗೊಂದು ಸಿಹಿಸುದ್ದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುಟ್ಯೂಬ್ ಬಳಕೆದಾರರಿಗೊಂದು ಸಿಹಿಸುದ್ದಿ..!

ಸಾಮಾನ್ಯವಾಗಿ ಯುಟ್ಯೂಬ್ ಉಪಯೋಗಿಸದೇ ಇರುವವರು ತೀರಾ ಕಡಿಮೆ. ಅದರಲ್ಲೂ ಇಂದಿನ ಯುವ ಪೀಳಿಗೆಂತೂ ಯುಟ್ಯೂಬ್ ನೋಡದೇ ಒಂದು ದಿನವೂ ಇರುವುದಿಲ್ಲ. ದಿನದ ಬಹುತೇಕ ಸಮಯವನ್ನು ಅನೇಕರು ಯುಟ್ಯೂಬ್‌ನಲ್ಲಿಯೇ ಕಳೆಯೋದನ್ನೂ ನೋಡಿದ್ದೇವೆ. ಹೀಗೆ ಯುಟ್ಯೂಬ್ ಹೆಚ್ಚಾಗಿ ಬಳಸುವವರಿಗೊಂದು ಸಂತಸದ ಸುದ್ದಿ ನೀಡಿದೆ ಯುಟ್ಯೂಬ್.

ಹೌದು, ಯುಟ್ಯೂಬ್ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ನೀವು ಹೆಚ್ಚು ಹುಡುಕುವ ವಿಡಿಯೋ ವಿಷಯವನ್ನು ಸಂಘಟಿಸಲು ಸಹಾಯ ಮಾಡಲಿದೆ ಈ ವೈಶಿಷ್ಟ್ಯತೆ. ಅದರ ಹೆಸರೇ ಚಾಪ್ಟರ್. ಈ ಸೌಲಭ್ಯ ವಿಡಿಯೋ ಕ್ರಿಯೇಟರ್ ತಮ್ಮ ಕಂಟೆಂಟ್ ಅನ್ನು ಉತ್ತಮ ರೀತಿಯಾಗಿ ನಿರ್ವಹಿಸಲು ಸಹಕಾರ ನೀಡುತ್ತದೆ. ಇನ್ನು ದೀರ್ಘಾವಧಿ ವಿಡಿಯೋಗಳಿಗೂ ಅನುಕೂಲ ಆಗಲಿದೆ.

ಈ ಚಾಪ್ಟರ್ಸ್ ಸಾಕಷ್ಟು ರೀತಿಯಲ್ಲಿ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಈ ಚಾಪ್ಟರ್ಸ್ ಮೂಲಕ ಬೇಕಾದನ್ನು ಮಾತ್ರ ನೋಡಬಹುದಾಗಿದೆ. ಬೇಡದೇ ಇರುವುದನ್ನು ಬಿಟ್ಟುಬಿಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...