alex Certify ಮೋದಿ ʼಪ್ಯಾಕೇಜ್ʼ ಗೆ ಹೂಡಿಕೆದಾರರಿಂದ ಭರ್ಜರಿ ಸ್ವಾಗತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ʼಪ್ಯಾಕೇಜ್ʼ ಗೆ ಹೂಡಿಕೆದಾರರಿಂದ ಭರ್ಜರಿ ಸ್ವಾಗತ

ಕೊರೊನಾ ವೈರಸ್ ನಿಂದ ದೇಶದ ಆರ್ಥಿಕ ಬಿಕ್ಕಟ್ಟು ನಿವಾರಿಸಲು ಮೋದಿ ಸರ್ಕಾರ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಭಾರತೀಯ ಷೇರು ಮಾರುಕಟ್ಟೆ ಈ ಪ್ಯಾಕೇಜ್ ಅನ್ನು ಬಹಿರಂಗವಾಗಿ ಸ್ವಾಗತಿಸಿದೆ.

ಷೇರು ಮಾರುಕಟ್ಟೆ ಶುರುವಾದ ಆರಂಭದಲ್ಲಿ ಸೆನ್ಸೆಕ್ಸ್ 1100 ಅಂಕಗಳ ಏರಿಕೆಯೊಂದಿಗೆ 32,400 ಅಂಕಗಳೊಂದಿಗೆ ವಹಿವಾಟು ನಡೆಸಿತ್ತು.  ನಿಫ್ಟಿ ಸುಮಾರು 300 ಪಾಯಿಂಟ್‌ಗಳ ಏರಿಕೆ ಕಂಡಿದ್ದು, ಅದು 9,500 ಪಾಯಿಂಟ್‌ಗಳ ಸಮೀಪ ತಲುಪಿತ್ತು. ಆದ್ರೆ ಕೆಲವೇ ನಿಮಿಷಗಳಲ್ಲಿ  ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ  ಬ್ಯಾಂಕಿಂಗ್ ಮತ್ತು ವಾಹನ ವಲಯದ ಷೇರುಗಳು ಹೆಚ್ಚಳವನ್ನು ದಾಖಲಿಸಿದವು.

ಹೂಡಿಕೆದಾರರ ಉತ್ಸಾಹ ಇನ್ನೂ ತಾತ್ಕಾಲಿಕವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಬಹುಶಃ ಲಾಭ ಕಾಯ್ದಿರಿಸಲು ಹೂಡಿಕೆ ಮಾಡಲಾಗುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ಯಾಕೇಜ್ ಘೋಷಣೆ ಮಾಡಿದ ನಂತ್ರ ಶಾಶ್ವತ ಪ್ರತಿಕ್ರಿಯೆ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...