alex Certify ಮದ್ಯದ ಹೋಮ್ ಡಿಲೆವರಿಗೆ ತಯಾರಿ ನಡೆಸಿದೆ ಈ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ಯದ ಹೋಮ್ ಡಿಲೆವರಿಗೆ ತಯಾರಿ ನಡೆಸಿದೆ ಈ ಕಂಪನಿ

ಆಹಾರ ವಿತರಣಾ ಕಂಪನಿ ಜೊಮಾಟೊ ಆನ್‌ಲೈನ್ ಆದೇಶಗಳ ಮೂಲಕ ಜನರ ಮನೆ ಬಾಗಿಲಿಗೆ ಮದ್ಯ ತಲುಪಿಸಲು ತಯಾರಿ ನಡೆಸುತ್ತಿದೆ. ಲಾಕ್ ಡೌನ್ ಮಧ್ಯೆ ದೇಶದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಇದ್ರಿಂದ ಮದ್ಯದಂಗಡಿಗಳಿಗೆ ಸಾಕಷ್ಟು ಲಾಭವಾಗ್ತಿದೆ. ಇದರ ಲಾಭ ಪಡೆಯಲು ಈಗ ಜೊಮಾಟೊ ಬಯಸಿದೆ.

ಕಂಪನಿಯು ಇಂಟರ್ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ ಅಸೋಸಿಯೇಷನ್ ​​ಆಫ್ ಇಂಡಿಯಾಗೆ ಒಪ್ಪಿಗೆ ನೀಡುವಂತೆ ಪತ್ರ ಬರೆದಿದೆ. ಲಾಕ್‌ಡೌನ್‌ನಿಂದಾಗಿ ಕಂಪನಿಯ ಆಹಾರ ವಿತರಣಾ ವ್ಯವಹಾರವು ತೀವ್ರವಾಗಿ ಕುಸಿದಿದೆ. ಆದ್ದರಿಂದ ಈ ಹೊಸ ವ್ಯವಹಾರಕ್ಕೆ ಕಾಲಿಡುವ ಮೂಲಕ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕಂಪನಿ ಬಯಸಿದೆ. ಇತ್ತೀಚೆಗೆ ಜೊಮಾಟೊ ಕಿರಾಣಿ ವಿತರಣೆಯನ್ನು ಸಹ ಪ್ರಾರಂಭಿಸಿದೆ.

ಭಾರತದಲ್ಲಿ ಈವರೆಗೆ ಮದ್ಯವನ್ನು ಹೋಮ್ ಡಿಲೆವರಿ ಮಾಡಲಾಗ್ತಿಲ್ಲ. ಅದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಈಗ ಅನುಮತಿ ನೀಡುವಂತೆ ಜೊಮಾಟೊ ಮನವಿ ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...