alex Certify ಬೆಂಬಲ ಬೆಲೆ: ಇಲ್ಲಿದೆ ಯಾವ ಬೆಳೆಗೆ ಎಷ್ಟು ಎಂಬುದರ ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಬಲ ಬೆಲೆ: ಇಲ್ಲಿದೆ ಯಾವ ಬೆಳೆಗೆ ಎಷ್ಟು ಎಂಬುದರ ಡಿಟೇಲ್ಸ್

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಭತ್ತ, ರಾಗಿ, ಜೋಳ ಸೇರಿದಂತೆ ಒಟ್ಟು 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶೇ.50 ರಿಂದ ಶೇ.84 ರವರೆಗೂ ಹೆಚ್ಚಳ ಮಾಡಿದೆ.

ಯಾವ ಬೆಳೆಗೆ ಎಷ್ಟು ಬೆಂಬಲ ಬೆಲೆ ಹೆಚ್ಚಳವಾಗಿದೆ ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಭತ್ತಕ್ಕೆ 53 ರೂಪಾಯಿ ಹೆಚ್ಚಳವಾಗಿದ್ದು, ಈಗ ಪ್ರತಿ ಕ್ವಿಂಟಾಲ್ ಗೆ 1,868 ರೂಪಾಯಿಗಳಾಗಿದೆ.

ರಾಗಿ 145 ರೂಪಾಯಿ ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್ ಗೆ 3,295 ರೂಪಾಯಿ ತಲುಪಿದೆ.

ಜೋಳ 70 ರೂಪಾಯಿ ಹೆಚ್ಚಳದೊಂದಿಗೆ ಕ್ವಿಂಟಾಲ್ ಗೆ 2,620 ರೂ. ಆಗಿದೆ.

ಸಜ್ಜೆ 640 ರೂಪಾಯಿ ಹೆಚ್ಚಳದೊಂದಿಗೆ 2,640 ರೂಪಾಯಿ ತಲುಪಿದೆ.

ಮೆಕ್ಕೆಜೋಳ 90 ರೂಪಾಯಿ ಹೆಚ್ಚಳದೊಂದಿಗೆ ಕ್ವಿಂಟಾಲ್ ಗೆ 1,850 ರೂಪಾಯಿ ಆಗಿದೆ.

ಉದ್ದು 300 ರೂಪಾಯಿ ಹೆಚ್ಚಳದೊಂದಿಗೆ 6,000 ರೂ.ತಲುಪಿದೆ.

ತೊಗರಿ ಪ್ರತಿ ಕ್ವಿಂಟಾಲ್‌ ಗೆ 200 ರೂಪಾಯಿ ಹೆಚ್ಚಳದೊಂದಿಗೆ 6,000 ರೂ. ಆಗಿದೆ.

ಅಲಸಂದೆ 146 ರೂಪಾಯಿ ಹೆಚ್ಚಳದೊಂದಿಗೆ 7,196 ರೂಪಾಯಿ ತಲುಪಿದೆ.

ಸೋಯಾಬೀನ್‌ 170 ರೂ. ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 3,880 ರೂ. ಆಗಿದೆ.

ಸೂರ್ಯಕಾಂತಿ 235 ರೂಪಾಯಿ ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 5,885 ರೂ. ತಲುಪಿದೆ.

ಕಡಲೆಕಾಯಿ 185 ರೂ. ಹೆಚ್ಚಳದೊಂದಿಗೆ ಕ್ವಿಂಟಾಲ್‌ ಗೆ 5275 ರೂ. ಆಗಿದೆ.

ಎಳ್ಳು 370 ರೂಪಾಯಿ ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 6,855 ರೂಪಾಯಿಗಳಾಗಿದೆ.

ಹುಚ್ಚೆಳ್ಳು 775 ರೂ. ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 6,695 ರೂಪಾಯಿ ತಲುಪಿದೆ.

ಹತ್ತಿ 260 ರೂ. ಹೆಚ್ಚಳದೊಂದಿಗೆ ಪ್ರತಿ ಕ್ವಿಂಟಾಲ್‌ ಗೆ 5,515 ರೂಪಾಯಿಗಳಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...