alex Certify ಬಿಗ್ ನ್ಯೂಸ್: ಉದ್ಯಮ ವಲಯಕ್ಕೆ ಪುನಶ್ಚೇತನ ನೀಡಲು ಕೇಂದ್ರದಿಂದ 6 ತಿಂಗಳು GST ವಿನಾಯಿತಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಉದ್ಯಮ ವಲಯಕ್ಕೆ ಪುನಶ್ಚೇತನ ನೀಡಲು ಕೇಂದ್ರದಿಂದ 6 ತಿಂಗಳು GST ವಿನಾಯಿತಿ…?

ದೇಶದಲ್ಲಿ ಕರೋನಾ ವೈರಸ್ ತನ್ನ ಅಟ್ಟಹಾಸ ಮುಂದುವರಿಸುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ 1ತಿಂಗಳಿನಿಂದ ಲಾಕ್ ಡೌನ್ ಜಾರಿಗೊಳಿಸಿದೆ. ಮೇ 3 ರವರೆಗೂ ಇದು ಮುಂದುವರಿಯಲಿದ್ದು, ಆದರೆ ಕರೋನಾ ನಿಯಂತ್ರಣಕ್ಕೆ ಬಾರದ ಕಾರಣ ಇದು ಮತ್ತಷ್ಟು ದಿನಗಳ ಕಾಲ ಮುಂದುವರಿಸಬಹುದೆಂದು ಹೇಳಲಾಗುತ್ತಿದೆ.

ಲಾಕ್ ಡೌನ್ ನಿಂದಾಗಿ ಉದ್ಯಮಗಳು ಬಂದ್ ಆಗಿರುವ ಪರಿಣಾಮ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ನೆಲ ಕಚ್ಚಿದೆ. ಒಂದು ವೇಳೆ ಲಾಕ್ ಡೌನ್ ತೆರವುಗೊಂಡರೂ ಉದ್ಯಮಗಳು ಮತ್ತೆ ಹಳಿಗೆ ಬರಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಕೆಲವೊಂದು ವಲಯಗಳಿಗೆ ಆರು ತಿಂಗಳುಗಳ ಕಾಲ ಜಿಎಸ್ಟಿ ವಿನಾಯಿತಿ ನೀಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಅದರಲ್ಲೂ ವಿಮಾನ ಯಾನ ಕ್ಷೇತ್ರ ಸೇರಿದಂತೆ ಕೆಲವೊಂದು ವಲಯಗಳು ಈ ಮೊದಲೇ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಈಗ ಮತ್ತಷ್ಟು ಕೆಳಕ್ಕಿಳಿದಿದೆ. ಹಾಗಾಗಿ ಜಿಎಸ್ಟಿ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪುನಶ್ಚೇತನ ನೀಡಲು ಜಿಎಸ್ಟಿ ಇಳಿಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ಈ ಪ್ರಸ್ತಾವನೆ ಇನ್ನೂ ಚರ್ಚೆಯ ಹಂತದಲ್ಲಿದ್ದು, ಅನುಷ್ಠಾನಗೊಳ್ಳಬೇಕೆಂದರೆ ಜಿಎಸ್ಟಿ ಕೌನ್ಸಿಲ್ ಒಪ್ಪಿಗೆ ಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...