alex Certify ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ ಕಂಪನಿ

ರಿಲಯನ್ಸ್ ಜಿಯೋ, ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. ರಿಲಯನ್ಸ್ ಜಿಯೋ ಗ್ರಾಹಕರು ತಮ್ಮ ನೆಟ್ವರ್ಕ್‌ನಲ್ಲಿ ಇತರ ಗ್ರಾಹಕರ ಖಾತೆಗಳನ್ನು ರೀಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಅವರು ಕ್ಯಾಶ್‌ಬ್ಯಾಕ್ ಸಹ ಪಡೆಯುತ್ತಾರೆ. ಜಿಯೋ ಇತ್ತೀಚೆಗೆ ‘ಜಿಯೋ ಅಸೋಸಿಯೇಟ್ ಪ್ರೋಗ್ರಾಂ’ ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಬಳಕೆದಾರರು ತಮ್ಮ ಸ್ನೇಹಿತರು, ಸಂಬಂಧಿ ಮೊಬೈಲ್ ಗೆ ರಿಚಾರ್ಜ್ ಮಾಡುವ ಮೂಲಕ ಹಣ ಸಂಪಾದಿಸುವ ಅವಕಾಶವನ್ನು ಪಡೆಯುತ್ತಾರೆ.

ಮಾಹಿತಿ ಪ್ರಕಾರ,ಈ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಶೇಕಡಾ 4ರಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ. ಮೊಬೈಲ್ ಆ್ಯಪ್ ಮೂಲಕ ಇತರ ಗ್ರಾಹಕರ ಖಾತೆಗಳಿಗೂ ರಿಚಾರ್ಜ್ ಮಾಡಬಹುದು.ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಜಾರಿಯಲ್ಲಿದ್ದು, ಅನೇಕ ಜನರಿಗೆ ರಿಚಾರ್ಜ್ ಮಾಡಲು ಸಾಧ್ಯವಾಗ್ತಿಲ್ಲ. ಅವರಿಗೆ ಸಹಾಯವಾಗಲಿ ಎಂದು ಜಿಯೋ ಈ ಕ್ರಮ ಕೈಗೊಂಡಿದೆ.

ಲಾಕ್ ಡೌನ್ ವೇಳೆ ಜಿಯೋ ಗ್ರಾಹಕರಿಗೆ ಅನುಕೂಲವಾಗುವ ಕೆಲ ಸೇವೆಗಳನ್ನು ನೀಡ್ತಿದೆ. ಗ್ರಾಹಕರ ಒಳಬರುವ ಕರೆ ಲಾಕ್ ಡೌನ್ ಮುಗಿಯುವವರೆಗೂ ಮುಂದುವರೆಯಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...