alex Certify ‘ಜನ್ ‌ಧನ್’ ಖಾತೆ ಹೊಂದಿರುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜನ್ ‌ಧನ್’ ಖಾತೆ ಹೊಂದಿರುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೇಂದ್ರ ಸರ್ಕಾರದ ಜನ್ ‌ಧನ್ ಯೋಜನೆಯಡಿ ಅನೇಕ ಫಲಾನುಭವಿಗಳಿಗೆ ಸಾಕಷ್ಟು ಯೋಜನೆಗಳನ್ನು ಕೇಂದ್ರ ನೀಡಿದೆ. ಇದೀಗ ಮತ್ತೊಂದು ಯೋಜನೆಯನ್ನು ಸರ್ಕಾರ ಫಲಾನುಭವಿಗಳಿಗೆ ನೀಡುತ್ತಿದೆ. ಇದರ ಜೊತೆಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ದಾರರಿಗೂ ವಿಮಾ ಯೋಜನೆ ಇದೆ.

ಸಾಮಾನ್ಯವಾಗಿ ಖಾತೆದಾರರಿಗೆ ಎಟಿಎಂ ಕಾರ್ಡ್‌ನಲ್ಲಿ ವಿಮಾ ಸೌಲಭ್ಯವನ್ನು ಆಯಾಯ ಬ್ಯಾಂಕ್‌ಗಳು ನೀಡಿವೆ. ಈ ಯೋಜನೆಗಳೊಂದಿಗೆ ದುಪ್ಪಟ್ಟು ಲಾಭವನ್ನೂ ಪಡೆಯಬಹುದಾಗಿದೆ.

ಹೌದು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ದಾರರು 30 ಸಾವಿರದಿಂದ 1 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಪಡೆಯಬಹುದಾಗಿದೆ. ಒಂದಕ್ಕಿಂತ ಹೆಚ್ಚು ಖಾತೆಗಳಿದ್ದೂ, ಹೆಚ್ಚು ಕಾರ್ಡ್‌ಗಳಿದ್ದರೂ ಕೇವಲ ಒಂದು ಕಾರ್ಡ್‌ಗೆ ಮಾತ್ರ ಈ ಯೋಜನೆ ಅಪ್ಲೇ ಆಗಲಿದೆ.

ಇನ್ನು ಜನ್‌ಧನ್ ಯೋಜನೆಯ ಫಲಾನುಭವಿಗಳಿಗೆ ಇದರಿಂದ ಹೆಚ್ಚಿನ ಲಾಭ ಇದೆ. ಜನ ಧನ್ ಖಾತೆ ಹೊಂದಿರುವ ಮತ್ತು ರುಪೇ ಡೆಬಿಟ್ ಕಾರ್ಡ್ ಬಳಸುವವರಿಗೆ 30 ಸಾವಿರ ವಿಮಾ ಸೌಲಭ್ಯ ಲಭ್ಯವಿದೆ. ಲಾಭ ಹೊರತುಪಡಿಸಿ ಜನ ಧನ್ ಖಾತೆದಾರರಿಗೆ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ಪ್ರತ್ಯೇಕವಾಗಿ ನೀಡುತ್ತದೆ.

ಆದರೆ ಕಾರ್ಡ್ ಬಳಕೆ ಸಕ್ರಿಯವಾಗಿರಬೇಕಾಗುತ್ತದೆ. ಕಳೆದ 60 ದಿನಗಳಿಂದ ಬಳಕೆದಾರರ ಕಾರ್ಡ್‌ಗಳು ಸಕ್ರಿಯವಾಗಿಲ್ಲದಿದ್ದರೆ ನಂತರ ವಿಮಾ ಹಕ್ಕು ರದ್ದುಗೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...