alex Certify ಚಿನ್ನ-ಬೆಳ್ಳಿ ದರದಲ್ಲಿ ಮುಂದುವರೆದ ಹಾವು ಏಣಿ ಆಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿನ್ನ-ಬೆಳ್ಳಿ ದರದಲ್ಲಿ ಮುಂದುವರೆದ ಹಾವು ಏಣಿ ಆಟ..!

ಚಿನ್ನ – ಬೆಳ್ಳಿ ದರಗಳಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ಲಾಕ್‌ಡೌನ್ ಸಮಯದಲ್ಲಿಯೂ ಬೆಳ್ಳಿ ಹಾಗೂ ಚಿನ್ನದಲ್ಲಿ ಏರಿಕೆ ಇಳಿಕೆ ಕಾಣುತ್ತಿದೆ. ಇತ್ತೀಚೆಗಷ್ಟೆ ಚಿನ್ನದ ದರ ಅಲ್ಪ ಮಟ್ಟಿಗೆ ಏರಿಕೆಯಾಗಿತ್ತು. ಆದರೆ ಇಂದು ಚಿನ್ನ – ಬೆಳ್ಳಿಯ ದರದಲ್ಲಿ ಕೊಂಚ ಇಳಿಕೆ ಕಂಡಿದೆ.

ಹೌದು, ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 100 ರೂಪಾಯಿ ಇಳಿಕೆ ಕಂಡಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 100 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 43,250 ರೂಪಾಯಿ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 47,390 ರೂಪಾಯಿ ಆಗಿದೆ.

ಇನ್ನು ಬೆಳ್ಳಿಯ ದರದಲ್ಲಿ ಕೊಂಚ ಮಟ್ಟಿನ ಇಳಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿಗೆ 50 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಬೆಳ್ಳಿ ದರ 42,950 ರೂಪಾಯಿ ಆಗಿದೆ. ಈ ಮೂಲಕ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಹಾವು ಏಣಿ ಆಟ ಮುಂದುವರೆದಿದ್ದು, ಇವುಗಳ ದರ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...