ಮಂಗಳವಾರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಬುಧವಾರ ಮತ್ತೆ ಹೆಚ್ಚಾಗಿದೆ. ಬುಧವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 47356 ರೂಪಾಯಿಯಾಗಿದೆ. ಮಂಗಳವಾರ ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ ಕಂಡು ಬಂದಿತ್ತು. ಚಿನ್ನ ಸುಮಾರು 48000 ರೂಪಾಯಿಗಳಿಂದ 46966 ರೂಪಾಯಿಗೆ ಇಳಿದಿತ್ತು. ಇನ್ನು ಬೆಳ್ಳಿ ಬೆಲೆ ಕೆ.ಜಿಗೆ 1515 ರೂಪಾಯಿಯಷ್ಟು ಏರಿಕೆ ಕಂಡಿದೆ.
ಇಂದು ಚಿನ್ನದ ಬೆಲೆ 527 ರೂಪಾಯಿ ಜಿಗಿದು 10 ಗ್ರಾಂಗೆ 47365 ರೂಪಾಯಿಯಾಗಿದೆ. ಕಳೆದ 10 ವ್ಯವಹಾರಿಕ ದಿನಗಳಲ್ಲಿ ಚಿನ್ನವು 10 ಗ್ರಾಂಗೆ 45743 ರೂಪಾಯಿಯಿಂದ 48000 ರೂ. ಕ್ಕೆ ಏರಿತ್ತು. ಆದ್ರೆ ದಿನ ಒಂದು ಸಾವಿರಕ್ಕೂ ಹೆಚ್ಚು ನಷ್ಟದಿಂದ 46966 ಕ್ಕೆ ತಲುಪಿತ್ತು.
ಮೇ 5, 2020 ರಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 45743 ರೂಪಾಯಿಯಿತ್ತು. ಇದರ ನಂತರ ಅದು ಮೇ 8 ರಂದು 46221 ಕ್ಕೆ ತಲುಪಿತ್ತು. ಆದರೆ ಇದು ಮೇ 14 ರಿಂದ ವೇಗವನ್ನು ಪಡೆದಿತ್ತು.