alex Certify ಕೊರೊನಾ ಸಂಕಟದ ಮಧ್ಯೆ ಸಣ್ಣ ವ್ಯಾಪಾರಿಗಳಿಗೆ ನೆರವಾಗ್ತಿದೆ ಫೇಸ್ಬುಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಟದ ಮಧ್ಯೆ ಸಣ್ಣ ವ್ಯಾಪಾರಿಗಳಿಗೆ ನೆರವಾಗ್ತಿದೆ ಫೇಸ್ಬುಕ್

ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್‌ಬುಕ್  ಹೊಸ ಸೇವಾ ಮಳಿಗೆಗಳನ್ನು ಪ್ರಾರಂಭಿಸಲಿದೆ. ಕಂಪನಿಯ ಸಿಇಒ  ಮಾರ್ಕ್ ಜುಕರ್‌ಬರ್ಗ್ ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದ್ರ ಮೂಲಕ ಶಾಪರ್‌ಗಳು ಫೇಸ್‌ಬುಕ್‌ನಲ್ಲಿ ತಮ್ಮ ಅಂಗಡಿಯನ್ನು ಸ್ಥಾಪಿಸಬಹುದು. ವಸ್ತುಗಳ ಬಗ್ಗೆ ಜನರಿಗೆ ಈ ಮೂಲಕ ಮಾಹಿತಿ ನೀಡಬಹುದು.

ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಸಹ ಆನ್‌ಲೈನ್ ಪ್ಲಾಟ್‌ಫಾರ್ಮ್ ಲಾಭ ಪಡೆಯಬಹುದು.  ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇದು ಸಹಾಯವಾಗಲಿದೆ ಎಂದು ಜುಕರ್ ಬರ್ಗ್ ಹೇಳಿದ್ದಾರೆ.

ಫೇಸ್ಬುಕ್ ಶಾಪ್ ಹೆಸರಿನಲ್ಲಿ ಅಂಗಡಿ ತೆರೆಯಬಹುದು. ಫೇಸ್ಬುಕ್ ಹಾಗೂ ಇನ್ಸ್ಟ್ರಾಗ್ರಾಮ್ ನಲ್ಲಿ ಇದು ಲಭ್ಯವಾಗಲಿದೆ. ಲಭ್ಯವಿರುವ ವ್ಯಾಪಾರಸ್ಥರ ಜೊತೆ ಗ್ರಾಹಕರು ವಾಟ್ಸಾಪ್ ಹಾಗೂ ಇನ್ಸ್ಟ್ರಾಗ್ರಾಮ್ ಮೂಲಕ ಚಾಟ್ ಮಾಡಬಹುದು. ಗ್ರಾಹಕರು ಅಂಗಡಿಯಲ್ಲಿ ಲಭ್ಯವಿರುವ ವಸ್ತುಗಳನ್ನು ನೋಡಿ ಆರ್ಡರ್ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...