alex Certify ಕೊರೊನಾ ರೋಗಿಗಳಿಗೆ ಖುಷಿ ಸುದ್ದಿ…! ಕಡಿಮೆಯಾಯ್ತು ಈ ಔಷಧಿ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ರೋಗಿಗಳಿಗೆ ಖುಷಿ ಸುದ್ದಿ…! ಕಡಿಮೆಯಾಯ್ತು ಈ ಔಷಧಿ ಬೆಲೆ

COVID-19 treatment: Fabiflu by Glenmark, HCQ, Remdesivir and other ...

ಕೋವಿಡ್ -19 ಏರಿಕೆಯಾದ ನಂತ್ರ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಸದ್ಯ ಕೊಡ್ತಿರುವ ಔಷಧಿ ಬೆಲೆ ಹೆಚ್ಚಾಗಿದೆ.

ಇದು ಸಾಮಾನ್ಯ ಜನರ ಮೇಲೆ ಪರಿಣಾಮ ಬೀರಿದೆ. ಒಂದು ಆರೋಗ್ಯದ ಮೇಲಾದ್ರೆ ಇನ್ನೊಂದು ಆರ್ಥಿಕತೆ ಮೇಲೆ. ಈ ಮಧ್ಯೆ ಜನಸಾಮಾನ್ಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಕಳೆದ ತಿಂಗಳು ಪ್ರಾರಂಭಿಸಿದ ಕೋವಿಡ್ -19 ಔಷಧಿ ಫ್ಯಾಬಿಫ್ಲೂ ಬೆಲೆಯನ್ನು ಶೇಕಡಾ 25 ಕ್ಕಿಂತ ಕಡಿಮೆ ಮಾಡಿದೆ.

ಕಂಪನಿಯು ಈ ಔಷಧಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ ಸಮಯದಲ್ಲಿ, ಒಂದು ಟ್ಯಾಬ್ಲೆಟ್ ನ ಬೆಲೆ 103 ರೂಪಾಯಿಯಿತ್ತು. ಈಗ  ಟ್ಯಾಬ್ಲೆಟ್‌ 80 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗಲಿದೆ. ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ಹಾಗೂ ಹೆಚ್ಚಿನ ಉತ್ಪಾದನೆಯಾಗ್ತಿರುವ ಕಾರಣ ಬೆಲೆ ಕಡಿಮೆಯಾಗಿದೆ.

ಈಗ ಈ ಔಷಧಿ 75 ರೂಪಾಯಿಗೆ ಲಭ್ಯವಾಗಲಿದೆ. ಫ್ಯಾಬಿಫ್ಲೂ ಅವರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವೂ ಪೂರ್ಣಗೊಂಡಿದೆ. ಇದ್ರ ಫಲಿತಾಂಶ ಬೇಗ ಹೊರಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...