alex Certify ಉಬರ್ ‌ನಲ್ಲಿ ಮತ್ತೊಂದಿಷ್ಟು ಜನರ ಕೆಲಸಕ್ಕೆ ಕತ್ತರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಬರ್ ‌ನಲ್ಲಿ ಮತ್ತೊಂದಿಷ್ಟು ಜನರ ಕೆಲಸಕ್ಕೆ ಕತ್ತರಿ..!

ಲಾಕ್‌ಡೌನ್‌ನಿಂದಾಗಿ ಈಗಾಗಲೇ ಅನೇಕ ಮಂದಿ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಇನ್ನು ಅನೇಕ ಕಂಪನಿಗಳು ತಮ್ಮ ನೌಕರರನ್ನು ಕೆಲಸದಿಂದ ತೆಗೆದು ಹಾಕಿದೆ. ಅತ್ತ ಬೇರೆ ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ ನೌಕರರು. ಈ ಬೆನ್ನಲ್ಲೇ ಇದೀಗ ಮತ್ತೆ ಉಬರ್ ಕಂಪನಿ ಮತ್ತೊಂದಿಷ್ಟು ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ.

ಹೌದು, ಕಳೆದ ವಾರವಷ್ಟೆ ಊಬರ್ ತನ್ನಲ್ಲಿದ್ದ 3500 ಮಂದಿ ಕೆಲಸಗಾರರನ್ನು ತೆಗೆದು ಹಾಕಿತ್ತು. ಆದರೆ ಇದೀಗ ಮತ್ತೆ 3 ಸಾವಿರ ಮಂದಿಯನ್ನು ಕಂಪನಿ ಕೈ ಬಿಟ್ಟಿದೆ. ಒಟ್ಟು 6500 ಮಂದಿಗೆ ತನ್ನ ಕಂಪನಿಯಿಂದ ಗೇಟ್‌ಪಾಸ್ ನೀಡಿದೆ ಉಬರ್.

ಆರ್ಥಿಕ ಹಿಂಜರಿತ ಹಾಗೂ ನಷ್ಟದ ಕಾರಣವೊಡ್ಡಿ ಕೆಲಸಗಾರರನ್ನು ತೆಗೆದು ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇನ್ನು ಜಾಗತಿಕ ಮಟ್ಟದಲ್ಲಿ ಉಬರ್‌ನ ಸುಮಾರು 45 ಕಚೇರಿಗಳು ಮುಚ್ಚಲಿದೆಯಂದೆ. ಹಾಗೂ ನಷ್ಟ ಭರಿಸಲು ಹಲವು ದಾರಿಗಳನ್ನು ಹುಡುಕಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...