alex Certify ಉತ್ತಮ ಫೀಚರ್‌ನೊಂದಿಗೆ ಕಡಿಮೆ ಬೆಲೆಯ ಫೋನ್‌ಗಳನ್ನು ಬಿಡುಗಡೆ ಮಾಡಿದ ನೋಕಿಯಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ಫೀಚರ್‌ನೊಂದಿಗೆ ಕಡಿಮೆ ಬೆಲೆಯ ಫೋನ್‌ಗಳನ್ನು ಬಿಡುಗಡೆ ಮಾಡಿದ ನೋಕಿಯಾ…!

ಹಬ್ಬದ ಸೀಜನ್ ಪ್ರಾರಂಭವಾದರೆ ಸಾಕು ಮೊಬೈಲ್ ಕೊಳ್ಳುವವರಿಗೆ ಸುಗ್ಗಿಯ ಕಾಲವೇ ಸರಿ. ವಿಭಿನ್ನ ಹಾಗೂ ಕಡಿಮೆ ದರದಲ್ಲಿ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಗ್ರಾಹಕರಿಗೆ ಸುವರ್ಣಾವಕಾಶಗಳನ್ನು ಮೊಬೈಲ್ ಕಂಪನಿಗಳು ನೀಡುತ್ತವೆ.

ಇದೀಗ ನೋಕಿಯಾ ಕಂಪನಿ ಕೂಡ ಉತ್ತಮ ಫೀಚರ್ ಇರುವ 2 ಮೊಬೈಲ್‌ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟಿದೆ.

ಹೌದು, ನೋಕಿಯಾ 215 ಮತ್ತು 225 ಎಂಬ ಹೆಸರಿನ ಎರಡು ಮೊಬೈಲ್‌ಗಳು ಮಾರುಕಟ್ಟೆಗೆ ಬಂದಿವೆ.

ದುಬಾರಿ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಎಲ್ಲಾ ಫೀಚರ್ಸ್ ಗಳು ಈ ಎರಡು ಮೊಬೈಲ್‌ನಲ್ಲಿ ಸಿಗುತ್ತವೆ. 4 ಜಿ ವೈಶಿಷ್ಟ್ಯವನ್ನು ಹೊಂದಿರುವ ಮೊಬೈಲ್ ಗಳಾಗಿವೆ. ನಾಳೆಯಿಂದ ಈ ಎರಡು ಮೊಬೈಲ್‌ಗಳು ಆನ್‌ಲೈನ್‌ನಲ್ಲಿ ಸಿಗಲಿವೆ. ನವೆಂಬರ್ 4 ರಿಂದ ಅಂಗಡಿಗಳಲ್ಲಿ ಅಂದರೆ ಆಫ್‌ಲೈನ್ ಮಾರಾಟ ಶುರುವಾಗುತ್ತಿದೆ.

ಇನ್ನು ಈ ಮೊಬೈಲ್‌ಗಳ ದರ ಕೂಡ ಕಡಿಮೆ ಇದೆ. ನೋಕಿಯಾ 215 ಮೊಬೈಲ್ 2949 ರೂಪಾಯಿಗಳಾದರೆ, ನೋಕಿಯಾ 225 ಮೊಬೈಲ್ 3499 ರೂಪಾಯಿಗಳು. ನೋಕಿಯಾ 225 ಮೊಬೈಲ್ ನವೆಂಬರ್ 6 ರಿಂದ ಶಾಪ್‌ಗಳಲ್ಲಿ ಸಿಗಲಿದೆ. ಸದಾ ಗ್ರಾಹಕರ ಆರ್ಥಿಕತೆಗೆ ತಕ್ಕಂತೆ ಮೊಬೈಲ್ ಬಿಡುಗಡೆ ಮಾಡುವ ನೋಕಿಯಾ ಕಂಪನಿ ಇದೀಗ ಕಡಿಮೆ ದರದ ಮತ್ತೆರಡು ಮೊಬೈಲ್ ಬಿಡುಗಡೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...