alex Certify ಇನ್ಮುಂದೆ ಮನೆಗೆ ಡೆಲಿವರಿ ಮಾಡಲಿದೆ ಪ್ರಸಿದ್ಧ ಚಪ್ಪಲಿ ಕಂಪನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಮುಂದೆ ಮನೆಗೆ ಡೆಲಿವರಿ ಮಾಡಲಿದೆ ಪ್ರಸಿದ್ಧ ಚಪ್ಪಲಿ ಕಂಪನಿ

ಕೊರೊನಾ ಲಾಕ್ ಡೌನ್ ಲೆದರ್ ಕಂಪನಿಗಳ ಮೇಲೂ ಪರಿಣಾಮ ಬೀರ್ತಿದೆ. ದೇಶದ ಪ್ರಸಿದ್ಧ ಪಾದರಕ್ಷೆಗಳ ಕಂಪನಿ ಬಾಟಾ ಇಂಡಿಯಾ ಈಗ ಪಾದರಕ್ಷೆಗಳನ್ನು ಮನೆಗೆ ತಲುಪಿಸಲಿದೆ. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಯಲು ನಡೆಯುತ್ತಿರುವ ಲಾಕ್‌ಡೌನ್‌ನಲ್ಲಿ ಮಾರಾಟವನ್ನು ಹೆಚ್ಚಿಸಲು ಬಾಟಾ ಇಂಡಿಯಾ ಹೊಸ ಪ್ಲಾನ್ ಮಾಡಿದೆ.

ಕಂಪನಿಯು ಈಗ ಪಾದರಕ್ಷೆಗಳನ್ನು ಮನೆಗೆ ತಲುಪಿಸಲಿದೆ. ಮಾರ್ಚ್ 25 ರಿಂದ ಹೊರಡಿಸಲಾದ ಲಾಕ್‌ಡೌನ್‌ನಿಂದಾಗಿ ಪಾದರಕ್ಷೆಗಳ ಕಂಪನಿಗಳ ಶೋ ರೂಂ ಮುಚ್ಚಲಾಗಿದೆ. ಇದ್ರಿಂದ ಕಂಪನಿ ಆರ್ಥಿಕ ಸಂಕಷ್ಟದಲ್ಲಿದೆ. ಮಾರಾಟ ಹೆಚ್ಚಳಕ್ಕೆ ಹೋಮ್ ಡಿಲೆವರಿ ಅನಿವಾರ್ಯವೆಂದು ಬಾಟಾ ಕಂಪನಿ ಎಂಡಿ ಹೇಳಿದ್ದಾರೆ.

ಅಂಗಡಿಗಳ ಬಾಗಿಲು ತೆರೆಯುತ್ತಿದೆ. ಆದ್ರೆ ಅಂಗಡಿಗಳಿಗೆ ಭೇಟಿ ನೀಡಲು ಜನರು ಹೆದರುತ್ತಿದ್ದಾರೆ. ಇದ್ರಿಂದ ವ್ಯಾಪಾರ ನಂಬಿ ಬದುಕುತ್ತಿರುವವರಿಗೆ ತೊಂದರೆಯಾಗಿದೆ. ಇಂಥ ಸಂದರ್ಭದಲ್ಲಿ ಜನರಿಗೆ ಸುರಕ್ಷತೆ ಜೊತೆ ಅನುಕೂಲ ಮಾಡಿಕೊಡಲು ಬಾಟಾ ಕಂಪನಿ ಮುಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...