ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 2026ರ ಜನವರಿ 5ರಿಂದ ಜಾರಿಗೆ ಬರುವಂತೆ ಕೊಡಗು-ಬೆಂಗಳೂರು, ಕೊಡಗು-ಮೈಸೂರು ಮಾರ್ಗದ ಐಷಾರಾಮಿ ಬಸ್‌ಗಳ ದರವನ್ನು ಕಡಿತ ಮಾಡಿದೆ.
ಕ.ರಾ.ರ.ಸಾ.ನಿಗಮ ಪುತ್ತೂರು ವಿಭಾಗದ ವತಿಯಿಂದ ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಗೋಣಿಕೊಪ್ಪ, ಸೋಮವಾರಪೇಟೆಯಿಂದ ಬೆಂಗಳೂರು ಹಾಗೂ ಮೈಸೂರಿಗೆ ಕಾರ್ಯಾಚರಿಸುವ ರಾಜಹಂಸ ಹಾಗೂ ನಾನ್ ಎಸಿ ಸ್ಲೀಪರ್ ಮಾದರಿಯ ಸಾರಿಗೆಗಳ ಪ್ರಯಾಣ ದರವನ್ನು ಕಡಿಮೆ ಮಾಡಲಾಗಿದೆ.
ಈ ಕುರಿತು ಕ.ರಾ.ರ.ಸಾ.ನಿ. ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಮಾಹಿತಿಯನ್ನು ನೀಡಿದ್ದಾರೆ. ಕುಶಾಲನಗರ-ಬೆಂಗಳೂರು ನಾನ್ ಎಸಿ ಸ್ಲೀಪರ್ ಬಸ್ ಪ್ರಯಾಣದರ ರೂ. 780 ಇತ್ತು. ಪ್ರಸ್ತುತ ನಿಗದಿಪಡಿಸಿದ ಪ್ರಯಾಣ ದರ ರೂ. 700 ಆಗಿದೆ.
ರಾಜಹಂಸ ಮಾದರಿ ಬಸ್‌ನಲ್ಲಿ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣ ದರ ರೂ. 680 ಆಗಿತ್ತು. ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ. 550 ಆಗಿದೆ. ಕುಶಾಲನಗರ-ಬೆಂಗಳೂರು ರಾಜಹಂಸ ಬಸ್ ದರ ಈ ಹಿಂದೆ ರೂ. 620 ಇತ್ತು. ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ. 500 ಆಗಿದೆ.
ವಿರಾಜಪೇಟೆ-ಬೆಂಗಳೂರು ಮಾರ್ಗದಲ್ಲಿ ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ. 620 ಆಗಿತ್ತು. ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ. 550 ಆಗಿದೆ.
ಗೋಣಿಕೊಪ್ಪ-ಬೆಂಗಳೂರು ಮಾರ್ಗದಲ್ಲಿ ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ. 620 ಆಗಿತ್ತು. ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ. 550 ಆಗಿದೆ. ಸೋಮವಾರಪೇಟೆ-ಬೆಂಗಳೂರು ಮಾರ್ಗದ ರಾಜಹಂಸ ಬಸ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ. 630. ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ. 550 ಆಗಿದೆ.
ಮಡಿಕೇರಿ-ಮೈಸೂರು ಮಾರ್ಗದ ನಾನ್ ಎಸಿ ಸ್ಲೀಪರ್ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ. 570 ಆಗಿತ್ತು. ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ. 450 ಆಗಿದೆ. ರಾಜಹಂಸ ಈ ಹಿಂದೆ ವಿಧಿಸುತ್ತಿದ್ದ ಪ್ರಯಾಣದರ ರೂ. 430 ಆಗಿತ್ತು. ಪ್ರಸ್ತುತ ನಿಗದಿಪಡಿಸಿದ ಪ್ರಯಾಣದರ ರೂ.280 ಆಗಿದೆ.
ಪ್ರಯಾಣಿಕರು ಈ ರಿಯಾಯಿತಿ ಪ್ರಯಾಣದರದ ಸದುಪಯೋಗವನ್ನು ಪಡೆದುಕೊಂಡು ನಿಗಮದ ಸಾರಿಗೆಗಳಲ್ಲಿ ಪ್ರಯಾಣಿಸುವಂತೆ ಕ.ರಾ.ರ.ಸಾ.ನಿ. ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.
2026ರ ಜನವರಿ 5ರಿಂದ ಜಾರಿಗೆ ಬರುವಂತೆ ಕೆಎಸ್ಆರ್‌ಟಿಸಿ ರಾಜ್ಯದ ವಿವಿಧ ಮಾರ್ಗದ ಐಷಾರಾಮಿ ಬಸ್‌ಗಳ ಪ್ರಯಾಣ ದರವನ್ನು ಕಡಿತ ಮಾಡಿದೆ. ಹೆಚ್ಚು ಪ್ರಯಾಣಿಕರನ್ನು ಆಕರ್ಷಣೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

