HomeKarnatakaBig Update: ಇ-ಖಾತೆ, ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರ ಗಮನಕ್ಕೆ

Big Update: ಇ-ಖಾತೆ, ನಗರಸಭೆ ವ್ಯಾಪ್ತಿಯ ಆಸ್ತಿ ಮಾಲೀಕರ ಗಮನಕ್ಕೆ

ಇ-ಖಾತೆ ಬಗ್ಗೆ ಕರ್ನಾಟಕದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಈಗ ಇ-ಖಾತೆ ಮಾಡಿಕೊಡಲಾಗುತ್ತಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರತಿ ಆಸ್ತಿಯ ಇ-ಖಾತಾ, ಬಿ-ಖಾತಾ ಸೃಜಿಸುವುದು ಸರ್ಕಾರ ಕಡ್ಡಾಯಗೊಳಿಸಿದೆ.

ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿ ಆಸ್ತಿಯ ಮಾಲೀಕರುಗಳು ಆಸ್ತಿಯ ಮಾಲೀಕತ್ವದ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಿ ಇ-ಖಾತಾ ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆ, ಆಟೋ ಪ್ರಚಾರ, ನಗರದ ಪ್ರಮುಖ ಸ್ಥಳಗಳಲ್ಲಿ ಇ-ಖಾತಾ, ಬಿ-ಖಾತಾ ಪಡೆಯುವ ಬಗ್ಗೆ ಮತ್ತು ಇ-ಖಾತಾ, ಬಿ-ಖಾತಾ ಪಡೆಯಲು ಸಲ್ಲಿಸಬೇಕಾದ ದಾಖಲೆಗಳ ವಿವರ ಇರುವ ಬ್ಯಾನರ್ ಅಳವಡಿಕೆ ಮತ್ತು ಸ್ಥಳೀಯ ಚಾನೆಲ್‍ಗಳಲ್ಲಿ ಸುದ್ದಿಯಾಗಿ ಪ್ರಚಾರ ಮಾಡಲಾಗುತ್ತಿದೆ.

ನಗರಸಭೆ ಸಿಬ್ಬಂದಿಗಳು ಪ್ರತಿ ವಾರ್ಡ್, ಪ್ರತಿ ಮನೆಗೆ ಖುದ್ದಾಗಿ ಭೇಟಿ ನೀಡಿ ಇ-ಖಾತಾ ಮಾಡಿಸಿಕೊಳ್ಳದೆ ಇರುವವರಿಗೆ ದಾಖಲೆ ನೀಡಿ ಇ-ಖಾತಾ ಪಡೆಯಲು ತಿಳಿಸಿ, ದಾಖಲೆ ನೀಡಿದವರಿಗೆ ಇ-ಖಾತಾ ಸೃಜಿಸಿ ನೀಡುವ ಕೆಲಸವನ್ನು ನಗರಸಭೆಯಿಂದ ಕೈಗೊಂಡಿದ್ದಾರೆ.  

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಗತ್ಯ ಇರುವ ದಾಖಲೆಗಳು: ನಗರ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮಾಲೀಕರುಗಳು ಇ-ಖಾತಾ, ಬಿ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳನ್ನು ಆಸ್ತಿತೆರಿಗೆ ಪಾವತಿಯ ವಿವರದೊಂದಿಗೆ ನಗರಸಭೆಗೆ ಸಲ್ಲಿಸದಿದ್ದರೆ ಇ-ಖಾತೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ.

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ವತ್ತಿನ ಮಾಲೀಕರುಗಳು, ಇ-ಖಾತಾ ಪಡೆಯದೆ ಇರುವವರು ಇ-ಖಾತಾ, ಬಿ-ಖಾತಾ ಪಡೆಯಲು ಸರ್ಕಾರ ಹೊಸದಾಗಿ ತಂತ್ರಾಂಶ ಚಾಲನೆಗೆ ತಂದಿದೆ. ಅದರಂತೆ ಇ-ಖಾತಾ ಪಡೆಯದ ಸ್ವತ್ತಿನ ಮಾಲೀಕರು eaasthi.karnataka.gov.in ವೆಬ್‍ಸೈಟ್‍ಗೆ ಹೋಗಿ ಸಿಟಿಜನ್ ಲಾಗಿನ್‍ನಲ್ಲಿ ತಮ್ಮ ಮೊಬೈಲ್ ನಂಬರ್ ಹಾಕಿ, ಇ-ಖಾತಾ, ಬಿ-ಖಾತಾ ಪಡೆಯಲು ಅವಶ್ಯವಿರುವ ದಾಖಲೆಗಳನ್ನು ಅಪ್‍ಲೋಡ್ ಮಾಡಿ ಮುಂದುವರಿಸಿದಲ್ಲಿ ನಗರಸಭೆಯಿಂದ ನಿಯಮನುಸಾರ ದಾಖಲೆ ಅನುಸಾರ ಇ-ಖಾತಾ, ಬಿ-ಖಾತಾ ಸೃಜಿಸಿ ನೀಡಲಾಗುವ ವ್ಯವಸ್ಥೆ ಜಾರಿಯಲ್ಲಿದೆ.

ಇಲ್ಲದಿದ್ದಲ್ಲಿ ಇ-ಖಾತಾ, ಬಿ-ಖಾತಾಕ್ಕೆ ಅವಶ್ಯವಿರುವ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಬೇಕು. ನಗರಸಭೆ ದಾಖಲೆ ಅಪ್‍ಲೋಡ್ ಮಾಡಿ ನಿಮ್ಮಿಂದ ಒಟಿಪಿ ಪಡೆದು ಮುಂದಿನ ಕ್ರಮವಹಿಸಿ ಇ-ಖಾತಾ ಸೃಜಿಸಿ ಕೊಡಲಾಗುವುದು.

ಸ್ವತ್ತಿನ ದಾಖಲೆ ತಂತ್ರಾಂಶದ ಮೂಲಕ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳುವಿಕೆ, ಆಸ್ತಿ ತೆರಿಗೆ ಪಾವತಿಗೆ ಕಚೇರಿಗೆ ಬಾರದೇ ತಾವೇ ಲೆಕ್ಕಚಾರ ಮಾಡಿ ಪಾವತಿಸುವ ಸರಳ ವಿಧಾನ ಮಾಡಲು ಎಲ್ಲಾ ಆಸ್ತಿಗಳ ಇ-ಖಾತಾ ಮಾಡುವುದು ಕಡ್ಡಾಯವಾಗಿರುತ್ತದೆ.

ಆದ್ದರಿಂದ ಇ-ಖಾತಾ ಪಡೆಯದೇ ಇರುವವರು ನಗರಸಭೆಯಿಮದ ಇ-ಖಾತಾಕ್ಕೆ ದಾಖಲೆ ಸಲ್ಲಿಸಿ ಕಡ್ಡಾಯವಾಗಿ ಪಡೆದುಕೊಳ್ಳುವಂತೆ ನಗರಸಭೆಗಳ ಪೌರಾಯುಕ್ತರು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular