HomeLatest Newsಕೇದಾರನಾಥ ಮಾರ್ಗಮಧ್ಯೆ ರಸ್ತೆಯಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್!

ಕೇದಾರನಾಥ ಮಾರ್ಗಮಧ್ಯೆ ರಸ್ತೆಯಲ್ಲೇ ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್!

ಡೆಹ್ರಾಡೂನ್: ಕೇದಾರನಾಥ್ ಅಮಾರ್ಗಮಧ್ಯೆ ರಸ್ತೆಯಲ್ಲಿಯೇ ಹೆಲಿಕಾಪ್ಟರ್ ಒಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.

ಯಾತ್ರಿಕರನ್ನು ಹೊತ್ತು ಕೇದಾರನಾಥಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಖಾಸಗಿ ಹೆಲಿಕಾಪ್ಟರ್ ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಗುಪ್ತ್ ಕಾಶಿ ಬಳಿ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ತಕ್ಷಣ ಪೈಲಟ್ ಹೆಲಿಕಾಪ್ಟರ್ ರಸ್ತೆಯಲ್ಲೇ ಲ್ಯಾಂಡ್ ಆಗಿ, ತುರ್ತು ಭೂಸ್ಪರ್ಶವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯಿಂದಾಗಿ ರಸ್ತೆಯಲ್ಲಿದ್ದ ಕಾರಿಗೆ ಹೆಲಿಕಾಪ್ಟರ್ ರಕ್ಕೆ ಬಡಿದ ಪರಿಣಾಮ ಕಾರು ನುಜ್ಜುಗುಜ್ಜಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆಲಿಕಾಪ್ಟರ್ ನಲ್ಲಿದ್ದ ಪ್ರಯಾಣಿಕರು, ಪೈಲಟ್ ಕೂಡ ಸುರಕ್ಷಿತವಾಗಿದ್ದಾರೆ. ಹೆಲಿಕಾಪ್ಟರ್ ರಕ್ಕೆ ಬಡಿದು ಕಾರು ಹಾನಿಯಾಗಿದೆ. ಸದ್ಯ ಅದರಲ್ಲಿ ಯಾರೂ ಇರಲಿಲ್ಲವಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular