HomeLatest Newsಆಸ್ಪತ್ರೆಯ ಐಸಿಯುನಲ್ಲೇ ಮಹಿಳಾ ರೋಗಿ ಮೇಲೆ ಅತ್ಯಾಚಾರ: ಮತ್ತು ಬರುವ ಔಷಧಿ ನೀಡಿ ಕೃತ್ಯ

ಆಸ್ಪತ್ರೆಯ ಐಸಿಯುನಲ್ಲೇ ಮಹಿಳಾ ರೋಗಿ ಮೇಲೆ ಅತ್ಯಾಚಾರ: ಮತ್ತು ಬರುವ ಔಷಧಿ ನೀಡಿ ಕೃತ್ಯ

ಜೈಪುರ: ಆಸ್ಪತ್ರೆಯ ಐಸಿಯುನಲ್ಲಿಯೇ ಮಹಿಳಾ ರೋಗಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಅಲ್ವಾರ್ ನ ಇಎಸ್ ಐಸಿ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ನಡೆದಿದೆ.

ಐಸಿಯುನಲ್ಲಿದ್ದ ಮಹಿಳಾ ರೋಗಿಗೆ ಮತ್ತು ಬರುವ ಔಷಧಿ ನೀಡಿ ನರ್ಸಿಂಗ್ ಸಿಬ್ಬಂದಿ ಅತ್ಯಾಚಾರ ಮಾಡಿದ್ದು, ಸಂತ್ರಸ್ತೆಯ ಕುಟುಂಬದವರು ಐಸಿಯು ವಾರ್ಡ್ ನ ಹೊರಗಿದ್ದಾಗಲೇ ಈ ಘಟನೆ ನಡೆದಿದೆ.

ಜೂನ್ 2ರಂದು ಮಹಿಳೆಯನ್ನು ಟ್ಯೂಬೆಕ್ಟಿಮಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 4ರಂದು ತಡರಾತ್ರಿ ಈ ಘಟನೆ ನಡೆದಿದೆ. ಐಸಿಯುನಲ್ಲಿದ್ದ ಮಹಿಳೆಗೆ ನರ್ಸಿಂಗ್ ಸಿಬ್ಬಂದಿ ಮತ್ತು ಬರುವ ಇಂಜಕ್ಷನ್ ನೀಡಿ, ಆಕೆಯ ಪತಿಯನ್ನು ಹೊರಹೋಗುವಂತೆ ಕಳುಹಿಸಿದ್ದಾರೆ. ಇಂಜಕ್ಷನ್ ನಿಂದಾಗಿ ಮಹಿಳೆ ಅರೆಪ್ರಜ್ಞಾವಸ್ಥೆಗೆ ತಲುಪಿದ್ದಾರೆ. ಮರುದಿನ ಜೂನ್ 5ರಂದು ರಾತ್ರಿ ಮಹಿಳೆ ತನ್ನ ಪತಿಯ ಬಳಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಿದ್ದಾರೆ. ನರ್ಸಿಂಗ್ ಸಿಬ್ಬಂದಿ ತನ್ನ ಸ್ಥಿತಿಯನ್ನು ದುರುಪಯೋಗಮಾಡಿಕೊಂಡಿದ್ದಾನೆ ಎಂದು ಕಣ್ಣೀರಿಟ್ಟಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಷಯ ತಿಳಿದ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸಂತ್ರಸ್ತೆ, ಡಾ.ದೀಪಿಕಾ ಅವರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಆರೋಪಿ ನರ್ಸಿಂಗ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಎಸ್ ಹೆಚ್ ಒ ಅಜಿತ್ ಬದ್ಸಾರ ದೃಢಪಡಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಆಸ್ಪತ್ರೆ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular