HomeLatest Newsರಾಷ್ಟ್ರೀಯ ಹೆದ್ದಾರಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕಾಮಗಾರಿ: ಸಂಸದ ರಾಜಶೇಖರ ಹಿಟ್ನಾಳ

ರಾಷ್ಟ್ರೀಯ ಹೆದ್ದಾರಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕಾಮಗಾರಿ: ಸಂಸದ ರಾಜಶೇಖರ ಹಿಟ್ನಾಳ

ಕೊಪ್ಪಳ: ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಕಾಮಗಾರಿಗಳಾಗುತ್ತಿವೆ ಎಂದು ಕೊಪ್ಪಳ ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.

ಅವರು ರವಿವಾರ ಕೊಪ್ಪಳ ಜಿಲ್ಲಾಡಳಿತ ಭವದಲ್ಲಿರುವ ಲೋಕಸಭಾ ಸದಸ್ಯರ ಕಛೇರಿಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹತ್ವದ ಕಾಮಗಾರಿಗಳಾಗುತ್ತಿರುವ ಕುರಿತು ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೊಪ್ಪಳ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಭಾರಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ–63 ರಲ್ಲಿ ಕೊಪ್ಪಳ ಪಟ್ಟಣ ವ್ಯಾಪ್ತಿಯಲ್ಲಿ ಒನ್ ಟೈಮ್ ಇಂಪ್ರುಮೆಂಟ್ ರೋಡ್ (One Time Improvement Road) ಯೋಜನೆಯಡಿ 43.03 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ ಒಟ್ಟು 2 ದೊಡ್ಡ ಮೇಲ್ಸೇತುವೆಗಳು, 2 ಸಣ್ಣ ಮೇಲ್ಸೇತುವೆಗಳು, 7 ಕಲ್ವರ್ಟಗಳು, 2 ಪೈಪ್ ಕಲ್ವರ್ಟಗಳು, ರಸ್ತೆ ಬದಿ ಚರಂಡಿ, ವಿದ್ಯುತ್ ದೀಪಗಳು, ಹೈಮಾಸ್ಕ್ ವಿದ್ಯುತ್ ದೀಪಗಳು, ತಡೆ ಗೋಡೆ ನಿರ್ಮಾಣವನ್ನು ಒಳಗೊಂಡಿರುತ್ತದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಎಂ ಉಷಾ ಯೋಜನೆಯಡಿ ಕೊಪ್ಪಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ ಅಂದಾಜು ಮೊತ್ತ 500 ಲಕ್ಷ ರೂ.ಗಳಲ್ಲಿ ರೈಲ್ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ ಸರ್ವಿಸಸ್ ಲಿಮಿಟೆಡ್ ವತಿಯಿಂದ ಅನುಷ್ಠಾನ ಮಾಡಲಾಗುತ್ತಿದೆ. ಇದರಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 3,06,67,154 ರೂ., ಕಟ್ಟಡ ದುರಸ್ಥಿ ಕಾಮಗಾರಿಗೆ 7,69,988 ರೂ., ಸಾಮಗ್ರಿ ಖರೀದಿಗೆ 1,73,62,538 ರೂ. ಹಾಗೂ ಇತರೆ ಕಾಮಗಾರಿಗೆ 1,20,000 ರೂ.ಗಳನ್ನು ನೀಡಲಾಗಿದೆ. ಇದೇ ಯೋಜನೆಯಡಿ ರಾಯಚೂರ ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ತುರುವಿಹಾಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ, ಹೆಚ್ಚುವರಿ ಕೊಠಡಿಗಳು ಮತ್ತು ಕಾಲೇಜು ನವೀಕರಣ ಕಾಮಗಾರಿಗೆ ಅಂದಾಜು ಮೊತ್ತ 500 ಲಕ್ಷ ರೂ.ಗಳಲ್ಲಿ ರೈಲ್ ಇಂಡಿಯಾ ಟೆಕ್ನಿಕಲ್ & ಎಕನಾಮಿಕ್ ಸರ್ವಿಸಸ್ ಲಿಮಿಟೆಡ್ ವತಿಯಿಂದ ಅನುಷ್ಠಾನ ಮಾಡಲಾಗುತ್ತಿದೆ. ಹಾಗೂ ಈ ಯೋಜನೆ ಅಡಿಯಲ್ಲಿಯೇ ಕೊಪ್ಪಳ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಅಂದಾಜು ಮೊತ್ತ 500 ಲಕ್ಷ ರೂ.ಗಳ ಮಂಜರಾಗಿದ್ದು, ಅನುಷ್ಠಾನ ಇಲಾಖೆ ನಿಗದಿಪಡಿಸಿ ಅಂದಾಜು ಪತ್ರಿಕೆ ತಯಾರಿಸಿ ಕಾಮಗಾರಿ ಪ್ರಾರಂಭಿಸಬೇಕಿದೆ ಎಂದು ಹೇಳಿದರು.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸನ್ 2025-26ನೇ ಸಾಲಿನಲ್ಲಿ 490 ಲಕ್ಷ ರೂ.ಗಳ ಅನುದಾನ ಮಂಜೂರಾಗಿರುತ್ತದೆ. ಇದರಲ್ಲಿ 485 ಲಕ್ಷ ರೂ.ಗಳನ್ನು ಬಳಕೆ ಮಾಡಲಾಗಿದೆ. ಎ.ಐ ಎಕ್ಸಲೆನ್ಸ್ ಕೇಂದ್ರ ಕಾಮಗಾರಿಗೆ ಅಂದಾಜು ಮೊತ್ತ 180 ಲಕ್ಷ ರೂ.ಗಳಲ್ಲಿ 2024-25 ನೇ ಸಾಲಿನ ಕೆ.ಕೆ.ಆ‌ರ್.ಡಿ.ಬಿ ಅನುದಾನದಡಿ ಕೊಪ್ಪಳ ಪಟ್ಟಣದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಎ.ಐ ಎಕ್ಸಲೆನ್ಸ್ ಕೇಂದ್ರ ನಿರ್ಮಾಣ ಮಾಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯನ್ನು ಶಿಕ್ಷಣ, ಮೂಲಸೌಕರ್ಯ, ತಂತ್ರಜ್ಞಾನ ಹಾಗೂ ಸಂಪರ್ಕ ವ್ಯವಸ್ಥೆಯಲ್ಲಿ ಮಾದರಿ ಜಿಲ್ಲೆಯಾಗಿ ರೂಪಿಸುವ ಸಂಕಲ್ಪ ನಮ್ಮದು. ಸರ್ಕಾರದ ಪ್ರತಿಯೊಂದು ಅನುದಾನವೂ ಜನರ ಅಭಿವೃದ್ಧಿಗೆ ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.

ಸಿ.ಎಸ್.ಆರ್ ಅನುದಾನದಲ್ಲಿ ಕುಣಕೇರಿ, ಹಿರೇಬಗನಾಳ, ಗುಳದಳ್ಳಿ, ಹಟ್ಟಿ, ಬಸಾಪಟ್ಟಣ, ಮನ್ನಾಪುರ, ಗುಮಗೇರಾ, ಹಿಟ್ನಾಳ ಹಾಗೂ ಅಗಳಕೇರಾ ಗ್ರಾಮಗಳಲ್ಲಿ ಶಾಖಾ ಅಂಚೆ ಕಛೇರಿ (Branch Post Office) ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ ಮತ್ತು ಗುನ್ನಾಳದಲ್ಲಿ ಶಾಖಾ ಅಂಚೆ ಕಛೇರಿ (Branch Post Office) ನಿರ್ಮಾಣ ಕಾಮಗಾರಿ ಪ್ರಾರಂಭಿಸಬೇಕಿದೆ ಎಂದು ಎಂದು ಸಂಸದರು ತಿಳಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular