HomeKarnatakaಡಿಎನ್ಎ ಟೆಸ್ಟ್‌ ಮಾಡಿಸದೆ ಮಗುವಿನ ಪಿತೃತ್ವ ನಿರಾಕರಣೆ ಮಾನಸಿಕ ಕ್ರೌರ್ಯಕ್ಕೆ ಸಮ: ಡಿವೋರ್ಸ್‌ ರದ್ದುಗೊಳಿಸಿದ ಹೈಕೋರ್ಟ್‌

ಡಿಎನ್ಎ ಟೆಸ್ಟ್‌ ಮಾಡಿಸದೆ ಮಗುವಿನ ಪಿತೃತ್ವ ನಿರಾಕರಣೆ ಮಾನಸಿಕ ಕ್ರೌರ್ಯಕ್ಕೆ ಸಮ: ಡಿವೋರ್ಸ್‌ ರದ್ದುಗೊಳಿಸಿದ ಹೈಕೋರ್ಟ್‌

ಬೆಂಗಳೂರು: ಪತ್ನಿಯ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ, ತನ್ನದೇ ಮಗುವಿಗೆ ತಾನು ತಂದೆಯಲ್ಲ ಎಂದು ವಿಛ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೇ ಡಿಎನ್ ಎ ಟೆಸ್ಟ್ ಮಾಡಿಸದೇ ಮಗುವಿನ ಪಿತೃತ್ವ ನಿರಾಕರಣೆ ಮಾಡುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ತಿಳಿಸಿದೆ.

ಪತ್ನಿಗೆ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಮಗುವಿನ ಪಿತೃತ್ವ ನಿರಾಕರಣೆ ಬಳಿಕ ಪತಿ DNA ಟೆಸ್ಟ್‌ಗೆ ಮುಂದಾಗದೆ ಇರುವುದು ಹಾಗೂ ಆರೋಪಗಳಿಗೆ ಸಾಕ್ಷ್ಯ ಒದಗಿಸಲು ವಿಫಲರಾಗಿದ್ದಾರೆ. ವಿವಾಹದ ಅವಧಿಯಲ್ಲಿ ಜನಿಸುವ ಮಗು ಕಾನೂನುಬದ್ಧವಾಗಿ ಗಂಡನದ್ದೇ ಆಗಿರುತ್ತದೆ ಎಂದು ತಿಳಿಸಿ ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ಆದೇಶವನ್ನು ರದ್ದುಗೊಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದು ಪ್ರಕರಣ?

ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಮಹಿಳೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ.ಅರುಣ್‌ ಮತ್ತು ನ್ಯಾಯಮೂರ್ತಿ ರಾಘವೇಂದ್ರ ಸೀತಾ ರಾಮ್‌ ಶ್ರೀವತ್ಸ ಅವರಿದ್ದ ವಿಭಾಗೀಯ ಪೀಠ, ಪತ್ನಿಯ ನಡತೆಯ ಬಗ್ಗೆ ಆರೋಪ ಮಾಡುವುದು, ಮಗುವಿನ ಪಿತೃತ್ವವನ್ನು ನಿರಾಕರಿಸಿ ಡಿಎನ್‌ಎ ಪರೀಕ್ಷೆಗೆ ಒಳಪಡಲು ಮುಂದಾಗದಿರುವುದು ಪತಿಯೇ ಪತ್ನಿಗೆ ನೀಡುವ ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ ಎಂದು ಹೈಕೋರ್ಟ್‌ ಅಭಿಪ್ರಾಯ ಪಟ್ಟಿದೆ. ಆಧಾರ ರಹಿತ ಆರೋಪಗಳನ್ನು ಪರಿಗಣಿಸಿ ಪತ್ನಿಗೆ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಪತಿ, ತನಗೆ ಜನಿಸಿದ ಮಗುವಿನ ಪಿತೃತ್ವವನ್ನು ನಿರಾಕರಿಸಿ, ಹೆಂಡತಿಯ ಚಾರಿತ್ರ್ಯ ವಧೆ ಮಾಡಿದ್ದಾರೆ. ಆದರೆ, ನ್ಯಾಯಾಲಯ ಮಗುವಿನ ತಂದೆ ಯಾರು ಎಂಬುದನ್ನು ತಿಳಿಯಲು ಡಿಎನ್‌ಎ ಪರೀಕ್ಷೆಗೆ ಒಳಪಡಲು ಸೂಚಿಸಿದಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾನೆ.

ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 112ರ ಪ್ರಕಾರ ವಿವಾಹದ ಅವಧಿಯಲ್ಲಿ ಜನಿಸುವ ಮಗು ಕಾನೂನುಬದ್ಧವಾಗಿ ಗಂಡನದ್ದೇ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಗಟ್ಟಿ ಸಾಕ್ಷ್ಯಗಳಿಲ್ಲದೆ ಪತ್ನಿಯ ನಡತೆಯ ಬಗ್ಗೆ ಸಾರ್ವಜನಿಕವಾಗಿ ನಿಂದಿಸುವುದು ಆಕೆಗೆ ಮಾಡುವ ಅವಮಾನ, ಮಾನಸಿಕ ಕ್ರೌರ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಪತ್ನಿಯ ವಿರುದ್ಧ ಪತಿಯು ಮಾಡುತ್ತಿರುವ ಆರೋಪಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ. ಸಾಬೀತು ಪಡಿಸಲು ವಿಫಲನಾಗಿದ್ದಾನೆ. ಪತ್ನಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಪೊಲೀಸ್‌​ ಠಾಣೆಗೆ ದೂರು ದಾಖಲಿಸಬೇಕಾದ ಅನಿವಾರ್ಯತೆ ಎದುರಾಗಿತ್ತು. ಆದರೆ, ಹೆರಿಗೆಯವರೆಗೂ ತವರು ಮನೆಯಲ್ಲಿರುವಂತೆ ಪೊಲೀಸರ ಸಮ್ಮುಖದಲ್ಲಿ ಪತಿ ಭರವಸೆ ನೀಡಿದ್ದಾರೆ. ಆದರೆ, ಪತ್ನಿಯಿಂದ ಕ್ರೌರ್ಯ ನಡೆದಿದೆ ಎಂಬುದಾಗಿ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಮಂಜೂರು ಮಾಡಿ ಆತುರದ ನಿರ್ಧಾರ ತೆಗೆದುಕೊಂಡು ತಪ್ಪು ಮಾಡಿದೆ ಎಂದು ಹೈಕೋರ್ಟ್ ನ್ಯಾಯಪೀಠ ಖಡಕ್ ಆಗಿ ತಿಳಿಸಿದೆ. ಅಲ್ಲದೇ ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ರದ್ದುಗೊಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular