HomeKarnatakaಹುಟ್ಟು ಹಬ್ಬ ಆಚರಿಸಲು ಬಂದ ಪ್ರೇಯಸಿ ಮೇಲೆ ಅತ್ಯಾಚಾರ: ಉಸಿರುಗಟ್ಟಿಸಿ ಬರ್ಬರ ಹತ್ಯೆ: ಹಂತಕನಿಗೆ ಜೀವಾವಧಿ...

ಹುಟ್ಟು ಹಬ್ಬ ಆಚರಿಸಲು ಬಂದ ಪ್ರೇಯಸಿ ಮೇಲೆ ಅತ್ಯಾಚಾರ: ಉಸಿರುಗಟ್ಟಿಸಿ ಬರ್ಬರ ಹತ್ಯೆ: ಹಂತಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಹಾಸನ: ಪ್ರೇಯಸಿ ಮೇಲೆಯೇ ಅತ್ಯಾಚಾರವೆಸಗಿ ಬಳಿಕ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆಗೈದಿದ್ದ ಅಪರಾಧಿಗೆ ಹಾಸನ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಹಾಸನದ 3ನೇ ಅಧಿಕ ಸಷೆನ್ಸ್ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ತನ್ನ‌ ಹುಟ್ಟುಹಬ್ಬ ಆಚರಣೆಗೆ ಬಂದ ಪ್ರೇಯಸಿಯನ್ನು ಅತ್ಯಾಚಾರವೆಸಗಿ, ಬಳಿಕ ಉಸಿರು ಗಟ್ಟಿಸಿ ಕೊಲೆ ಮಾಡಿದ್ದ ಪ್ರಿಯಕರ ಜೀವನ ಪರ್ಯಂತ ಜೈಲಿನಲ್ಲಿಯೇ ಕೊಳೆಯುವಂತೆ ಕೋರ್ಟ್ ಶಿಕ್ಷೆ ನೀಡಿದೆ.

ಪ್ರವೀಣ್ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. ಬೇಲೂರು ತಾಲ್ಲೂಕಿನ ಯುವತಿಯನ್ನ ಪ್ರೀತಿಸೋದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಇನ್ನು ಸಾಕ್ಷಿನಾಶ ಆರೋಪದಲ್ಲಿ ಎ2 ತಮ್ಮಣ್ಣಿಗೆ ಎರಡು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2018 ರ ಏಪ್ರಿಲ್ 22ರಂದು ತನ್ನ‌ ಹುಟ್ಟು ಹಬ್ಬ ಆಚರಣೆಗೆ ಬಂದಿದ್ದ ಪ್ರೇಯಸಿ ಮೇಲೆ ಹಾಡ್ಲಗೆರೆಯ ಪ್ರವೀಣ್ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಹಾಸನ‌ ತಾಲ್ಲೂಕಿನ ಕಲ್ಕೆರೆ ಗ್ರಾಮದ ಬಳಿ ಈ ಘಟನೆ ನಡೆದಿತ್ತು.

ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕಾರ್ಣ ದಾಖಲಾಗಿತ್ತು. ತನಿಖೆ ನಡೆಸಿ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿ ಕೋರ್ಟ್​​ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಬಳಿಕ ಹಾಸನದ 3ನೇ ಅಧಿಕ ಸಷೆನ್ಸ್ ಕೋರ್ಟ್ ಸುದೀರ್ಘ ವಿಚಾರಣೆ ನಡೆಸಿ ಅಂತಿಮವಾಗಿ ಅಪರಾಧಿ ಪ್ರವೀಣ್​​ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular