HomeKarnatakaಬರ ಪರಹಾರಿದಲ್ಲಿ ಗೊಂದಲಕ್ಕೆ ತೆರೆ ಎಳೆದ ಸಿ.ಎಂ ಡಿಕೆಶಿ

ಬರ ಪರಹಾರಿದಲ್ಲಿ ಗೊಂದಲಕ್ಕೆ ತೆರೆ ಎಳೆದ ಸಿ.ಎಂ ಡಿಕೆಶಿ

ಬೆಂಗಳೂರು- ಬರ ಪರಿಹಾರ ಪಾವತಿ ಕುರಿತು ರೈತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯದ ಎಲ್ಲ ಅರ್ಹ ಬರಪೀಡಿತ ರೈತರಿಗೆ ಒಟ್ಟು ₹5,000 ಬರ ಪರಿಹಾರ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ‘ಎಕ್ಸ್‌’ ಖಾತೆಯಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, ಸದ್ಯ ರೈತರ ಖಾತೆಗಳಿಗೆ ಜಮೆಯಾಗಿರುವುದು ಮೊದಲ ಕಂತಿನ ಹಣ ಮಾತ್ರವಾಗಿದ್ದು, ಅದನ್ನೇ ಅಂತಿಮ ಪರಿಹಾರ ಎಂದು ಭಾವಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಮೊದಲ ಕಂತಿನಲ್ಲಿ ಗರಿಷ್ಠ ₹2,500ವರೆಗೆ ಪರಿಹಾರ ಪಾವತಿಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ಮೊದಲ ಕಂತಿನಲ್ಲಿ ₹2,000 ಪಡೆದಿರುವ ರೈತರಿಗೆ ಮುಂದಿನ ಕಂತಿನಲ್ಲಿ ಬಾಕಿ ₹3,000 ಪಾವತಿಸಲಾಗುವುದು. ಅದೇ ರೀತಿ ಮೊದಲ ಕಂತಿನಲ್ಲಿ ₹2,500 ಪಡೆದ ರೈತರಿಗೆ ಮುಂದಿನ ಕಂತಿನಲ್ಲಿ ಉಳಿದ ₹2,500 ಪಾವತಿಸಲಾಗುತ್ತದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೂ ಬರ ಪರಿಹಾರ ಹೆಚ್ಚಿಸಲಾಗಿದೆ. SDRF/NDRF ಮಾನದಂಡಗಳಡಿ ದೊರೆಯುವ ಪರಿಹಾರದ ಜತೆಗೆ ರಾಜ್ಯ ಸರ್ಕಾರ ತನ್ನ ಸ್ವಂತ ಸಂಪನ್ಮೂಲದಿಂದ ಹೆಚ್ಚುವರಿ ಪರಿಹಾರದ ಮೊತ್ತವನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.

ಬೆಳೆ ನಷ್ಟದ ಪ್ರಮಾಣಕ್ಕೆ ಅನುಗುಣವಾಗಿ ಅರ್ಹ ರೈತರಿಗೆ ₹5,000ರಿಂದ ₹60,000ವರೆಗೆ ಪರಿಹಾರ ದೊರೆಯಲಿದೆ. ಹೀಗಾಗಿ, ಪ್ರಸ್ತುತ ಖಾತೆಗೆ ಜಮೆಯಾಗಿರುವ ಮೊತ್ತವನ್ನೇ ಅಂತಿಮ ಪರಿಹಾರ ಎಂದು ಪರಿಗಣಿಸಿ ರೈತರು ಗೊಂದಲಕ್ಕೊಳಗಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ಎಲ್ಲ ಅರ್ಹ ರೈತರಿಗೆ ಪೂರ್ಣ ಪ್ರಮಾಣದ ಪರಿಹಾರ ತಲುಪಿಸುವುದು ರಾಜ್ಯ ಸರ್ಕಾರದ ಬದ್ಧತೆಯಾಗಿದೆ. ರೈತರ ಹಿತ ಕಾಪಾಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಈ ಮೂಲಕ ಬರ ಪರಿಹಾರದ ಮೊತ್ತ, ಮೊದಲ ಕಂತಿನ ಪಾವತಿ ಹಾಗೂ ಮುಂದಿನ ಕಂತಿನಲ್ಲಿ ದೊರೆಯಲಿರುವ ಬಾಕಿ ಹಣದ ಕುರಿತು ರೈತರಲ್ಲಿ ಉಂಟಾಗಿರುವ ಗೊಂದಲಕ್ಕೆ ಮುಖ್ಯಮಂತ್ರಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular