HomeIPL 2026IPL 2026: ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಈ ತಂಡ ಪ್ಲೇಆಫ್ ತಲುಪಲು 4 ಪಂದ್ಯ ಗೆಲ್ಲಬೇಕು;...

IPL 2026: ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಈ ತಂಡ ಪ್ಲೇಆಫ್ ತಲುಪಲು 4 ಪಂದ್ಯ ಗೆಲ್ಲಬೇಕು; ಆದರೆ ತಂಡದ ಮುಂದಿನ 4 ಪಂದ್ಯ ನೋಡಿದ್ರೆ ನಡುಕ ಹುಟ್ಟುತ್ತೆ!

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ ಲೀಗ್ ಹಂತದ ದ್ವಿತೀಯಾರ್ಧದ ಪಂದ್ಯಗಳು ಜರುಗುತ್ತಿದ್ದು, ಟೂರ್ನಿ ಕಾತರತೆಯ ಘಟ್ಟಕ್ಕೆ ಬಂದು ತಲುಪಿದೆ.

ನಿನ್ನೆ ( ಏಪ್ರಿಲ್ 29 ) ಮುಂಬೈ ಇಂಡಿಯನ್ಸ್ ತಂಡವನ್ನು ಸನ್ ರೈಸರ್ಸ್ ಹೈದರಾಬಾದ್ ಲೀಗ್ ಹಂತದ 41ನೇ ಪಂದ್ಯದಲ್ಲಿ ಸೋಲಿಸಿ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದು, ಟಾಪ್ 4 ಸ್ಥಾನಕ್ಕಾಗಿ ಪೈಪೋಟಿ ಜೋರಾಗಿದೆ.

13 ಅಂಕಗಳೊಂದಿಗೆ ಪಂಜಾಬ್ ಕಿಂಗ್ಸ್ ಅಗ್ರಸ್ಥಾನದಲ್ಲಿದ್ದರೆ, ತಲಾ 12 ಅಂಕಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗಾಗಿ ಈ ನಾಲ್ಕು ತಂಡಗಳು ಇನ್ನೆರಡು ಪಂದ್ಯಗಳನ್ನು ಗೆದ್ದರೆ ಸಾಕು ಪ್ಲೇಆಫ್‌ಗೆ ಪ್ರವೇಶಿಸಲು ಬೇಕಾದ 16 ಅಂಕಗಳನ್ನು ಗಳಿಸಲಿದ್ದು, ಉಳಿದ ತಂಡಗಳಿಗೆ ಸದ್ಯ ಪ್ಲೇಆಫ್ ಹಾದಿ ಕಠಿಣವಾಗಿದೆ. ಅದರಲ್ಲೂ ಐದನೇ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಪ್ಲೇಆಫ್ ಪ್ರವೇಶದ ಹಾದಿ ಬಲು ಕಠಿಣವಾಗಿದೆ.

ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ಗುಜರಾತ್ ಟೈಟನ್ಸ್ 4 ಪಂದ್ಯಗಳಲ್ಲಿ ಗೆದ್ದಿದ್ದು, 4 ಪಂದ್ಯಗಳಲ್ಲಿ ಸೋತು 8 ಅಂಕಗಳನ್ನು ಪಡೆದುಕೊಂಡು ಐದನೇ ಸ್ಥಾನದಲ್ಲಿದ್ದು, ಪ್ಲೇಆಫ್ ಪ್ರವೇಶಿಸಬೇಕೆಂದರೆ ಉಳಿದ 6 ಪಂದ್ಯಗಳಲ್ಲಿ ಕಡ್ಡಾಯವಾಗಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಲೇಬೇಕಿದೆ.

ಆದರೆ ಗುಜರಾತ್ ಟೈಟನ್ಸ್ ತಂಡದ ಮುಂದಿನ ನಾಲ್ಕು ಪಂದ್ಯಗಳನ್ನು ನೋಡಿದರೆ ಅವರ ತಂಡಕ್ಕೇ ನಡುಕ ಹುಟ್ಟಿಸುವಂತಿದೆ. ಹೌದು, ಮೊದಲೇ ಹೇಳಿದಂತೆ ಈಗಾಗಲೇ ಪ್ಲೇಆಫ್ ರೇಸ್‌ನಲ್ಲಿ ಟಾಪ್‌ನಲ್ಲಿರುವ ನಾಲ್ಕು ತಂಡಗಳ ವಿರುದ್ಧ ಗುಜರಾತ್ ಕಣಕ್ಕಿಳಿಯಲಿದೆ.

ಇಂದು ( ಏಪ್ರಿಲ್ 30 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ, ಮೇ 3ರಂದು ಪಂಜಾಬ್ ಕಿಂಗ್ಸ್ ವಿರುದ್ಧ, ಮೇ 9ರಂದು ರಾಜಸ್ಥಾನ್ ರಾಯಲ್ಸ್ ಹಾಗೂ ಮೇ 12ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುಜರಾತ್ ಟೈಟನ್ಸ್ ಕಣಕ್ಕಿಳಿಯಬೇಕಿದೆ. ಹೀಗೆ ಮುಂದಿನ ನಾಲ್ಕು ಪಂದ್ಯಗಲೇ ಮುಳ್ಳಿನ ಹಾದಿಯಾಗಿರುವ ಗುಜರಾತ್ ಈ ಪಂದ್ಯಗಳ ಪೈಕಿ ಎರಡಕ್ಕಿಂತ ಹೆಚ್ಚು ಪಂದ್ಯ ಸೋತರೆ ಪ್ಲೇಆಫ್ ಆಸೆ ಕೈತಪ್ಪಿಹೋಗಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular