HomeLatest Newsಕಲ್ಯಾಣ ಮಂಟಪದಲ್ಲೇ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಕಲ್ಯಾಣ ಮಂಟಪದಲ್ಲೇ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರು: ಕಲ್ಯಾಣ ಮಂಟಪದಲ್ಲಿ ವಧುವಿನ ಕೊಠಡಿಯಲ್ಲಿದ್ದ 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದೆ.

ಗವಿಪುರ ಬಡಾವಣೆ ನಿವಾಸಿ ಎಲ್. ಶಿವಶಂಕರ್ ಅವರು ನೀಡಿದ ದೂರಿನ ಅನ್ವಯ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಬಂದು ಹೋಗುತ್ತಿರುವ ದೃಶ್ಯ ಕಲ್ಯಾಣ ಮಂದಿರದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನು ಆಧರಿಸಿ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಶಿವಶಂಕರ್ ತಮ್ಮ ಪುತ್ರಿಯ ಮದುವೆಗೆ ರಾಜಾಜಿನಗರದ ಸಪ್ತಪದಿ ಕಲ್ಯಾಣ ಮಂದಿರ ಬುಕ್ ಮಾಡಿದ್ದರು. ಮೇ 29ರಂದು ಸಂಜೆ ಆರತಕ್ಷತೆ ನಡೆದಿತ್ತು. ಗಣ್ಯರು ಸಂಬಂಧಿಕರು ಬಂದು ಉಡುಗೊರೆಗಳನ್ನು ನೀಡಿದ್ದರು. ವಧುವಿಗೆ ಸೇರಿದ ಚಿನ್ನಾಭರಣ, ನಗದು ಮತ್ತು ಉಡುಗೊರೆಗಳನ್ನು ಕೊಠಡಿಯಲ್ಲಿ ಸೂಟ್ಕೇಸ್ ನಲ್ಲಿ ಇಡಲಾಗಿದ್ದು, ಅದನ್ನು ಕಳವು ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 30 ರಂದು ಮುಹೂರ್ತ ಇದ್ದು ಮುಂಜಾನೆ ವಧು ಸಿದ್ದಗೊಂಡು ಕೆಲವು ಆಭರಣಗಳನ್ನು ಕೊಠಡಿಯಲ್ಲಿಟ್ಟು ಮುಹೂರ್ತಕ್ಕೆ ಹೋಗಿದ್ದಾರೆ. ಆಗ ನಕಲಿ ಕಿ ಬಳಸಿ ಬಾಗಿಲು ತೆಗೆದು ಒಳನುಗ್ಗಿದ ಕಳ್ಳ ನಗದು, ಕಿವಿಯೋಲೆ, ಚೈನ್ ಆಭರಗಳಿದ್ದ ಸೂಟ್ಕೇಸ್ ಅನ್ನು ಕಳವುಮಾಡಿದ್ದಾನೆ. ಮುಹೂರ್ತ ಮುಗಿಸಿ ಊಟವಾದ ಮೇಲೆ ರೂಮ್ ಗೆ ಬಂದಾಗ ಆವರಣಗಳು ಇದ್ದ ಸೂಟ್ಕೇಸ್ ಇರಲಿಲ್ಲ. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಪರಿಚಿತ ಬಂದು ಹೋದ ದೃಶ್ಯ ಕಂಡು ಬಂದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular