HomeLatest NewsSHOCKING : 'ಫ್ರೀಫೈರ್' ಗೇಮ್ ಅಡಿಕ್ಷನ್ : ತಾಯಿ ಬುದ್ಧಿವಾದ ಹೇಳಿದ್ದಕ್ಕೆ 14 ವರ್ಷದ ಬಾಲಕ...

SHOCKING : ‘ಫ್ರೀಫೈರ್’ ಗೇಮ್ ಅಡಿಕ್ಷನ್ : ತಾಯಿ ಬುದ್ಧಿವಾದ ಹೇಳಿದ್ದಕ್ಕೆ 14 ವರ್ಷದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ.!

ಹುಬ್ಬಳ್ಳಿ : ಆನ್‌ಲೈನ್ ಗೇಮ್‌ಗೆ ದಾಸನಾಗಿದ್ದ 14 ವರ್ಷದ ಬಾಲಕನೊಬ್ಬ, ತಾಯಿ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ಉದಯನಗರದಲ್ಲಿ ನಡೆದಿದೆ. ‘ಫ್ರೀಫೈರ್’ ಗೇಮ್‌ಗೆ ಅತಿಯಾಗಿ ಅಡಿಕ್ಟ್ ಆಗಿದ್ದ ಸಮರ್ಥ್ ಎಂಬ ಬಾಲಕನೇ ಈ ಅತಿರೇಕದ ನಿರ್ಧಾರಕ್ಕೆ ಶರಣಾದ ದುರ್ದೈವಿ.

ಗೇಮ್ ಅಡಿಕ್ಷನ್: ಸಮರ್ಥ್ ಕಳೆದ ಕೆಲವು ದಿನಗಳಿಂದ ಸತತವಾಗಿ ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್‌ಗಳನ್ನು ಆಡುತ್ತಿದ್ದ. ಗುರುವಾರ ರಾತ್ರಿಯೂ ಗೇಮ್ ಆಡುವುದರಲ್ಲಿ ಮಗ್ನನಾಗಿದ್ದಾಗ ತಾಯಿ ಆತನಿಗೆ ಬುದ್ಧಿವಾದ ಹೇಳಿದ್ದಾರೆ.

ತಕ್ಷಣದ ನಿರ್ಧಾರ : “ಮೊಬೈಲ್ ಸಾಕು ಮಾಡಿ ಓದಿಕೊಳ್ಳುವತ್ತ ಗಮನ ಹರಿಸು” ಎಂದು ಹೇಳಿದ ತಾಯಿ ಆತನ ಕೈಲಿದ್ದ ಫೋನ್ ಕಿತ್ತುಕೊಂಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಬಾಲಕ, ತಕ್ಷಣ ತನ್ನ ಕೋಣೆಗೆ ಹೋಗಿ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೃಶ್ಯ ಕಂಡು ಪೋಷಕರು ಶಾಕ್: ಸುಮಾರು 15-20 ನಿಮಿಷಗಳಾದರೂ ಮಗ ಹೊರಗೆ ಬಾರದಿದ್ದಾಗ ಆತಂಕಗೊಂಡ ತಂದೆ ಕಿಟಕಿಯಿಂದ ಇಣುಕಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಪೊಲೀಸ್ ಕಮಿಷನರ್ ಸಲಹೆ

ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ: ಮಕ್ಕಳು ಅಡಿಕ್ಷನ್‌ಗೆ ಒಳಗಾಗಿದ್ದರೆ ತಕ್ಷಣವೇ ಮೊಬೈಲ್ ಕಿತ್ತುಕೊಳ್ಳುವ ಬದಲು, ನಿಧಾನವಾಗಿ ಅದರಿಂದ ಹೊರಬರುವಂತೆ ಮಾಡಬೇಕು. ವ್ಯಸನ ಹೆಚ್ಚಾಗಿದ್ದರೆ ಶಿಕ್ಷಕರು ಅಥವಾ ಮಕ್ಕಳ ತಜ್ಞರ ಜೊತೆ ಸಮಾಲೋಚನೆ ನಡೆಸಿ. ಮೊಬೈಲ್ ಅನ್ನು ಜ್ಞಾನಾರ್ಜನೆ ಅಥವಾ ಹೊಸ ಕೌಶಲ್ಯ ಕಲಿಯಲು ಬಳಸುವಂತೆ ಪ್ರೇರೇಪಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular