HomeLatest Newsಅಂಡರ್-19 ಮಹಿಳಾ ಟಿ-ಟ್ವೆಂಟಿ ವಿಶ್ವಕಪ್ 2027 ವೇಳಾಪಟ್ಟಿ ಪ್ರಕಟ: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ಅಭಿಯಾನ...

ಅಂಡರ್-19 ಮಹಿಳಾ ಟಿ-ಟ್ವೆಂಟಿ ವಿಶ್ವಕಪ್ 2027 ವೇಳಾಪಟ್ಟಿ ಪ್ರಕಟ: ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ಅಭಿಯಾನ ಆರಂಭಿಸಲಿರುವ ಭಾರತ

ಐಸಿಸಿ ಮಹಿಳಾ ಅಂಡರ್-19 ಟಿ-ಟ್ವೆಂಟಿ ವಿಶ್ವಕಪ್ 2027ರ ಪೂರ್ಣ ವೇಳಾಪಟ್ಟಿ ಮತ್ತು ಗುಂಪುಗಳನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ. 2027ರ ಜನವರಿ 21ರಿಂದ ಬಾಂಗ್ಲಾದೇಶ ಹಾಗೂ ನೇಪಾಳ ಜಂಟಿ ಆತಿಥ್ಯದಲ್ಲಿ ಈ ಮೆಗಾ ಟೂರ್ನಿ ಆರಂಭವಾಗಲಿದ್ದು, ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಮೂರನೇ ಆವೃತ್ತಿಯ ಈ ಚೊಚ್ಚಲ ವಯೋಮಿತಿಯ ಜಾಗತಿಕ ಟೂರ್ನಿಯಲ್ಲಿ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಚಟ್ಟೋಗ್ರಾಮ್, ಸಿಲ್ಹೆಟ್ ಹಾಗೂ ಕಠ್ಮಂಡುವಿನ ನಾಲ್ಕು ಪ್ರಮುಖ ಕ್ರೀಡಾಂಗಣಗಳಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿವೆ. ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡವು ಗ್ರೂಪ್ ‘ಎ’ನಲ್ಲಿ ಸ್ಥಾನ ಪಡೆದಿದ್ದು, ಜನವರಿ 22ರಂದು ವೆಸ್ಟ್ ಇಂಡೀಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡುವ ಮೂಲಕ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನವನ್ನು ಆರಂಭಿಸಲಿದೆ. ಗ್ರೂಪ್ ‘ಎ’ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಹೊರತಾಗಿ ಐರ್ಲೆಂಡ್ ಹಾಗೂ ಆತಿಥೇಯ ನೇಪಾಳ ತಂಡಗಳಿವೆ.

ಉಳಿದಂತೆ ಗ್ರೂಪ್ ‘ಬಿ’ನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಸಮೋವಾ ತಂಡಗಳಿದ್ದರೆ, ಗ್ರೂಪ್ ‘ಸಿ’ನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೈಜೀರಿಯಾ ಮತ್ತು ಯುಎಇ ತಂಡಗಳಿವೆ. ಇನ್ನು ಗ್ರೂಪ್ ‘ಡಿ’ನಲ್ಲಿ ಇಂಗ್ಲೆಂಡ್, ಶ್ರೀಲಂಕಾ, ಅಮೆರಿಕ ಹಾಗೂ ಸ್ಕಾಟ್‌ಲ್ಯಾಂಡ್ ತಂಡಗಳು ಸೆಣಸಾಡಲಿವೆ. ಜನವರಿ 26ರವರೆಗೆ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಬಳಿಕ ಸೂಪರ್ ಸಿಕ್ಸ್ ಹಾಗೂ ಫೆಬ್ರವರಿ 4ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಚಾಂಪಿಯನ್ ಯಾರೆಂದು ನಿರ್ಣಯಿಸುವ ಫೈನಲ್ ಪಂದ್ಯವು ಫೆಬ್ರವರಿ 6ರಂದು ಆಯೋಜನೆಗೊಳ್ಳಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯುವ ಆಟಗಾರ್ತಿಯರಿಗೆ ತಮ್ಮ ಪ್ರತಿಭೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಈ ಟೂರ್ನಿ ಅತ್ಯುತ್ತಮ ವೇದಿಕೆಯಾಗಲಿದೆ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಂಜೋಗ್ ಗುಪ್ತಾ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular