ನ್ಯಾಚುರಲ್ ಸ್ಟಾರ್ ನಾನಿ ನಟನೆಯ ಬಹು ನಿರೀಕ್ಷಿತ ದಿ ಪ್ಯಾರಡೈಸ್ ಸಿನಿಮಾ ಇತ್ತೀಚೆಗೆ ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಪೀರಿಯಡ್ ಆಕ್ಷನ್ ಡ್ರಾಮಾ ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶಿಸಿದ್ದು, ಕಾಯಡು ಲೋಹರ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿನಿಮಾದ ಒಟಿಟಿ ಆವೃತ್ತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಇದು ಪ್ರೇಕ್ಷಕರ ಗಮನ ಸೆಳೆದಿದೆ.
ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಒರಿಜಿನಲ್ ಕಟ್ ಗಿಂತ ಒಟಿಟಿ ಆವೃತ್ತಿಯ ರನ್‌ಟೈಮ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಥಿಯೇಟರ್‌ನಲ್ಲಿ ಸಾಕಷ್ಟು ಟ್ರೋಲ್ ಆಗಿದ್ದ ಧೂಮವತಿ ಹಾಡಿನ ದೃಶ್ಯಗಳನ್ನು ಕಟ್ ಮಾಡಲಾಗಿದೆ. ಇದರೊಂದಿಗೆ ನಾನಿ ತಾಯಿ ಪಾತ್ರದ ಕೆಲವು ದೃಶ್ಯಗಳು ಹಾಗೂ ನಾನಿಗೆ ಸಂಬಂಧಿಸಿದ ಕೆಲ ಭಾಗಗಳನ್ನು ಒಟಿಟಿಯಲ್ಲಿ ಕೈಬಿಡಲಾಗಿದೆ.
ಈ ಹಿಂದೆ ಥಿಯೇಟರ್ ಆವೃತ್ತಿಯಲ್ಲಿ ವೇಗವಾಗಿ ಓಡುತ್ತಿದ್ದ ಎಂಡ್ ಕ್ರೆಡಿಟ್ಸ್ ಭಾಗವನ್ನು ಒಟಿಟಿಗಾಗಿ ನಿಧಾನಗೊಳಿಸಲಾಗಿದೆ. ಅಲ್ಲದೆ ಸಿನಿಮಾದ ದೃಶ್ಯಕಲೆ ಹಾಗೂ ಗ್ರಾಫಿಕ್ಸ್ ಗುಣಮಟ್ಟವನ್ನು ಸುಧಾರಿಸಲಾಗಿದೆ. ಒಟಿಟಿ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡುವ ಉದ್ದೇಶದಿಂದ ಈ ತಿದ್ದುಪಡಿಗಳನ್ನು ಮಾಡಲಾಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಈ ಚಿತ್ರ ಯಾವ ರೀತಿಯ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

