alex Certify ಬಿಡುಗಡೆಗೂ ಮುನ್ನವೇ ಸೋಲ್ಡ್‌ ಔಟ್ ಆದ ಇಟಲಿ ಮೂಲದ ಸ್ಕೂಟರ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಗೂ ಮುನ್ನವೇ ಸೋಲ್ಡ್‌ ಔಟ್ ಆದ ಇಟಲಿ ಮೂಲದ ಸ್ಕೂಟರ್..!

ಸಾಮಾನ್ಯವಾಗಿ ಬೈಕ್, ಸ್ಕೂಟರ್ ಹೊಸ ವಿನ್ಯಾಸದ ಮೂಲಕ ಮಾರುಕಟ್ಟೆಗೆ ಬಂದರೆ ವೈಶಿಷ್ಟ್ಯದ ಆಧಾರದ ಮೇಲೆ ಕೊಂಡುಕೊಳ್ಳೋದನ್ನ ನೋಡಿದ್ದೇವೆ. ಅದು ಮಾರುಕಟ್ಟೆಗೆ ಬಂದ ನಂತರ. ಆದರೆ ಇಟಲಿ ಮೂಲದ ಸ್ಕೂಟರ್ ಒಂದು ಬಿಡುಗಡೆಗೂ ಮುನ್ನವೇ ಸೋಲ್ಡೌಟ್ ಆಗಿದೆ.

ಹೌದು, ಇಟಲಿ ಮೂಲದ ಇಟಾಲ್‌ಜೆಟ್ ಮೋಟಾರ್ ಡ್ರ್ಯಾಗ್‌ಸ್ಟರ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿತ್ತು. ಬಿಡುಗಡೆಗೂ ಮುನ್ನವೇ ತಯಾರಿಸಿದ್ದ ಎಲ್ಲಾ ಸ್ಕೂಟರ್‌ಗಳು ಸೋಲ್ಡ್‌ ಔಟ್ ಆಗಿವೆ. ಕಂಪನಿ 499 ಸ್ಕೂಟರ್ ಅನ್ನು ಉತ್ಪಾದಿಸಿದೆ. ಸಿದ್ಧಪಡಿಸಿದ್ದ 499 ಸ್ಕೂಟರ್ ಗಳೂ ಮಾರಾಟವಾಗಿ ಅಚ್ಚರಿ ಮೂಡಿಸಿದೆ.

ಗ್ರಾಹಕರಿಗಾಗಿ 2 ವೆರಿಯಂಟ್‌ನಲ್ಲಿ ಸ್ಕೂಟರ್ 125 ಸಿಸಿ ಮತ್ತು 200ಸಿಸಿಯಲ್ಲಿ ಮಾರಾಟ ಮಾಡುತ್ತಿದೆ. ಮೇ ತಿಂಗಳಿನಲ್ಲೇ ಸ್ಕೂಟರ್ ಮಾರುಕಟ್ಟೆಗೆ ಬರಬೇಕಿತ್ತು. ಆದರೆ ಕೊರೊನಾದಿಂದಾಗಿ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಸೆಪ್ಟೆಂಬರ್ ತಿಂಗಳನಲ್ಲಿ ಈ ನೂತನ ಸ್ಕೂಟರ್ ಮಾರುಕಟ್ಟೆಗೆ ಪರಿಚಯಿಸಲು ಕಂಪೆನಿ ಸಿದ್ಧತೆ ಮಾಡಿಕೊಂಡಿದೆ. ಇನ್ನು ಈ ಸ್ಕೂಟರ್ ಬೆಲೆಯನ್ನು ಕಂಪನಿ ಬಹಿರಂಗ ಮಾಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...