alex Certify ರೈತ ಪ್ರತಿಭಟನೆ ಪರ ಟ್ವೀಟ್​ ಮಾಡಿ ಸುದ್ದಿಯಾದ ಪಾಪ್​ ಗಾಯಕಿ ಕುರಿತು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತ ಪ್ರತಿಭಟನೆ ಪರ ಟ್ವೀಟ್​ ಮಾಡಿ ಸುದ್ದಿಯಾದ ಪಾಪ್​ ಗಾಯಕಿ ಕುರಿತು ಇಲ್ಲಿದೆ ಮಾಹಿತಿ

ಅಂತಾರಾಷ್ಟ್ರೀಯ ಪಾಪ್​ ತಾರೆ ರಿಹನ್ನಾ ಕಳೆದ ಕೆಲ ದಿನಗಳಿಂದ ಟ್ರೆಂಡ್​ನಲ್ಲಿದ್ದಾರೆ. ರೈತ ಪ್ರತಿಭಟನೆಯ ವಿಚಾರವಾಗಿ ಟ್ವೀಟ್​ ಮಾಡುವ ಮೂಲಕ ರಿಹನ್ನಾ ಭಾರತೀಯರ ಮನ ಗೆದ್ದಿದ್ದಾರೆ.

ಹರಿಯಾಣದಲ್ಲಿ ಇಂಟರ್ನೆಟ್​ ಬಂದ್​ ಮಾಡಿರುವ ಬಗ್ಗೆ ಸಿಎನ್​ಎನ್​ ವರದಿಯನ್ನ ಶೇರ್​ ಮಾಡಿದ ರಿಹನ್ನಾ ನಾವೇಕೆ ಇದರ ಬಗ್ಗೆ ಮಾತನಾಡಬಾರದು ಎಂದು ಟ್ವೀಟ್​ ಮಾಡಿದ್ದರು.

ಈಕೆ ಟ್ವೀಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗಟ್ಟಲೇ ಲೈಕ್​ ಸಂಪಾದಿಸಿತ್ತು.

ಅಂದಹಾಗೆ ರಿಹನ್ನಾ ಕೆರಿಬಿಯನ್​ ರಾಷ್ಟ್ರವಾದ ಬಾರ್ಬಡೋಸ್​ನ ಪಾಪ್​ ಗಾಯಕಿ ಹಾಗೂ ಉದ್ಯಮಿ. 15ನೇ ವರ್ಷದಿಂದ ಸಂಗೀತ ಲೋಕಕ್ಕೆ ಕಾಲಿಟ್ಟ ರಿಹನ್ನಾ 2005ರಲ್ಲಿ ಮೊದಲ ಆಲ್ಬಮ್​ ಮ್ಯೂಸಿಕ್​ನ್ನು ಬಿಡುಗಡೆ ಮಾಡಿದ್ದರು.

2007ರಲ್ಲಿ ರಿಲೀಸ್​ ಆದ ಗುಡ್​ ಗರ್ಲ್​ ಗೋನ್​ ಬ್ಯಾಡ್​​ ಆಲ್ಬಮ್​ ಮೂಲಕ ರಿಹನ್ನಾ ಸಖತ್​ ಫೇಮಸ್​ ಆಗಿದ್ದರು. ಈಕೆಯ ಅಂಬ್ರೆಲ್ಲಾ ಆಲ್ಬಂ ಮೊದಲ ಗ್ರ್ಯಾಮಿ ಅವಾರ್ಡ್​ ತಂದುಕೊಟ್ಟಿದೆ.

ಅನ್ಫೇಥ್ಪುಲ್ಲ್, ಡೋಂಟ್​ ಸ್ಟಾಪ್​ ದ ಮ್ಯೂಸಿಕ್​, ವಾಟ್ಸ್​ ಮೈ ನೇಮ್​..? , ಡೈಮಂಡ್ಸ್, ವರ್ಕ್​, ರೇಟೆಡ್​ ಆರ್​, ಲೌಡ್​, ಟಾಕ್​ ದೆಟ್​ ಟಾಕ್​ ಹಾಗೂ ಅನ್​ಅಪೋಲೋಜೆಟಿಕ್​ ಈಕೆಗೆ ಹೆಸರು ತಂದುಕೊಟ್ಟ ಆಲ್ಬಂಗಳಾಗಿವೆ.

9 ಗ್ರ್ಯಾಮಿ ಅವಾರ್ಡ್ ಸೇರಿದಂತೆ 32 ವರ್ಷದ ಗಾಯಕಿ ಸಾಕಷ್ಟು ಪ್ರಶಸ್ತಿಗಳನ್ನ ಬಾಚಿಕೊಂಡಿದ್ದಾರೆ. 13 ಅಮೆರಿಕದ ಸಂಗೀತ ಲೋಕದ ಪ್ರಶಸ್ತಿ, 12 ಬಿಲ್​ಬೋರ್ಡ್​ ಸಂಗೀತ ಪ್ರಶಸ್ತಿ ಹಾಗೂ 6 ಗಿನ್ನೆಸ್​ ದಾಖಲೆಯನ್ನ ಮಾಡಿದ್ದಾರೆ.

2012 ಹಾಗೂ 2014ರಲ್ಲಿ ಫೋರ್ಬ್ಸ್​ ಸಮೀಕ್ಷೆ ಪ್ರಕಾರ ರಿಹನ್ನಾ ಟಾಪ್​ 10 ಅತಿ ಹೆಚ್ಚು ಹಣ ಗಳಿಸುವ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2012 ಹಾಗೂ 2018ರಲ್ಲಿ ಟೈಮ್ಸ್ ಮ್ಯಾಗ್ಜಿನ್​ ಟಾಪ್​ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...