alex Certify ರಾಖಿ ಸಾವಂತ್ ಪತಿಯ ಗುಟ್ಟು ಕೊನೆಗೂ ‘ಬಹಿರಂಗ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಖಿ ಸಾವಂತ್ ಪತಿಯ ಗುಟ್ಟು ಕೊನೆಗೂ ‘ಬಹಿರಂಗ’

ತನ್ನ ಮದುವೆಯ ಫೋಟೋ ಹಂಚಿಕೊಂಡ ಅಭಿನೇತ್ರಿ ರಾಖಿ ಸಾವಂತ್ ಗಂಡನ ಫೋಟೋ ಬಹಿರಂಗ ಮಾಡದೇ ಸುದ್ದಿಯಾಗಿದ್ದರು.

ಕಳೆದ ವರ್ಷ ರಾಖಿ ಸಾವಂತ್ ಮದುವೆಯ ವಸ್ತ್ರದಲ್ಲಿರುವ ತನ್ನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಡಿದ್ದರು. ಮದುವೆಯ ಬಗ್ಗೆ ಮಾಹಿತಿ ಕೇಳಿದ್ದ ಪತ್ರಕರ್ತರಿಗೆ ಅದು ಫೋಟೋಶೂಟ್ ನ ಫೋಟೋ ಎಂದು ತಿಳಿಸಿದ್ದಳು. ನಂತರ ರಾಖಿ ನಿಜವಾಗಿ ಮದುವೆಯಾಗಿದ್ದಳು ಎಂದು ತಿಳಿದುಬಂದಿತ್ತು.

ಆದರೆ ರಾಖಿ ಎಲ್ಲಿಯೂ ಸಹ ತನ್ನ ಗಂಡನ ಫೋಟೋಗಳನ್ನು ಹಂಚಿಕೊಂಡಿಲ್ಲ. ಈಗ ತನ್ನ ಮದುವೆಯ ಮತ್ತೊಂದಿಷ್ಟು ಫೋಟೋಗಳನ್ನು ರಾಖಿ ಹಂಚಿಕೊಂಡಿದ್ದು, ಅದರಲ್ಲೂ ಸಹ ತನ್ನ ಗಂಡನ ಗುರುತನ್ನು ಮುಚ್ಚಿಟ್ಟಿದ್ದಾರೆ.

ಅವರ ಗಂಡ ಯಾರು ಎಂದು ತಿಳಿದುಕೊಳ್ಳಲು ಹಲವರು ಇಷ್ಟಪಟ್ಟಿದ್ದಾರೆ. ಒಬ್ಬರೇ ಮದುವೆ ಮಾಡಿಕೊಂಡಿರಾ.?, ಗಂಡನ ಫೋಟೋಗಳನ್ನು ಏಕೆ ಕ್ರಾಪ್ ಮಾಡಿದ್ದೀರಾ..? ನಾವು ಅವರನ್ನು ನೋಡಲು ಇಷ್ಟ ಪಡುತ್ತೇವೆ ಎಂಬ ಹಲವರು ಕಮೆಂಟ್ ಮಾಡಿದ್ದಾರೆ.

ರಾಖಿ ಸಾವಂತ್ ಪತಿ ರಿತೇಶ್ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯನಾಗಿದ್ದು, ಐಟಿ ಉದ್ಯಮಿಯಾಗಿದ್ದಾರೆ ಎಂಬುದು ಈಗ ತಿಳಿದು ಬಂದಿದೆ. ರಾಖಿ ಸಾವಂತ್ ರಲ್ಲಿ ಏನನ್ನು ಬದಲಾಯಿಸಲು ಇಚ್ಛಿಸುತ್ತೀರಿ ಎಂದು ಅವರ ಪತಿಗೆ ಕೇಳಿದ ಪ್ರಶ್ನೆಗೆ, ನಾನು ರಾಖಿಯ ಯಾವುದೇ ಗುಣಗಳನ್ನು ಬದಲಾಯಿಸಲು ಇಷ್ಟಪಡುವುದಿಲ್ಲ, ನಾನು ಅವಳ ಜೊತೆ ತುಂಬಾ ಸಂತೋಷವಾಗಿ ಇದ್ದೇನೆ. ನಮ್ಮ ಕುಟುಂಬಗಳು ನಮ್ಮ ಮದುವೆಯಿಂದ ಸಂತಸಗೊಂಡಿದೆ. ರಾಖಿ ನನಗಿಂತ ತುಂಬಾ ದೊಡ್ಡ ಸ್ಥಾನದಲ್ಲಿದ್ದಾರೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...