alex Certify ಜಾಲತಾಣಗಳ ಹೊಸ ಟ್ರೆಂಡ್ “ವೆನ್ ಯು ಎಕ್ಸಿಡೆಂಟಲಿ ಟೈಪ್” | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಲತಾಣಗಳ ಹೊಸ ಟ್ರೆಂಡ್ “ವೆನ್ ಯು ಎಕ್ಸಿಡೆಂಟಲಿ ಟೈಪ್”

When You Accidentally Type' Meme is a Hit on Twitter and We Can't ...

ಸಾಮಾಜಿಕ ಜಾಲತಾಣ ಎಂಬುದು ಮೋಜಿನ ಗುಚ್ಛ. ಕ್ರಿಯಾಶೀಲ ವ್ಯಕ್ತಿಗಳ ಪ್ರತಿಭೆಗೆ ಇಲ್ಲಿ ಸೂಕ್ತ ಮನ್ನಣೆ ಸಿಗುತ್ತದೆ. ಕೆಲವು ಸಾಮಾನ್ಯ ಸಂದರ್ಭಗಳು ಇದ್ದಕ್ಕಿದ್ದಂತೆ ಸಾಕಷ್ಟು ವೈರಲ್ ಆಗಿ ಟ್ರೆಂಡ್ ಆಗಿಬಿಡುತ್ತವೆ. ಈಗ ಮಿಮ್ ಒಂದು ಸಖತ್ ಟ್ರೆಂಡ್ ಆಗಿದೆ.

“ವೆನ್ ಯು ಎಕ್ಸಿಡೆಂಟಲಿ ಟೈಪ್?”( ನೀವು ಆಕಸ್ಮಿಕವಾಗಿ ನಗುವ ಇಮೋಜಿ ಟೈಪ್ ಮಾಡಿದರೆ)ಎಂಬ ವಿಭಿನ್ನ ಮಿಮ್ ಗಳು ಈಗ ಎಲ್ಲ ಜಾಲತಾಣಗಳ ಏಕಾಗ್ರತೆಯನ್ನು ಸೆಳೆದಿವೆ.

ಈ ವಾಕ್ಯಕ್ಕೆ ಹೊಂದಾಣಿಕೆಯಾಗುವ ತಮ್ಮಿಷ್ಟದ ಹಾಡುಗಾರ ಹಾಗೂ ನಟನ ಭಾವಾಭಿನಯದ ಮಿಮ್ ಗಳನ್ನು ಮಾಡಿ ಹಲವರು ಹರಿಬಿಡುವ ಕೆ- ಪಾಪ್ ಫ್ಯಾನ್ಸ್ ನ ಹೊಸ ಟ್ರೆಂಡ್ ಸೃಷ್ಟಿಯಾಗಿದೆ.

ಅನುಷ್ಕಾ ನಾಯಕ್ ಎಂಬುವವರು ಕಂಗನಾ ರನಾವತ್ ಅವರ ಕ್ವೀನ್ ಚಿತ್ರದ ಅಳುವ ಸನ್ನಿವೇಶವನ್ನು ಜೋಡಿಸಿದ್ದಾರೆ. ಬಿಟಿಎಸ್ ಹಾಡುಗಾರ ಜಿಮಿನ್ಸ್ ಅವರ ನಗುವ ಎಕ್ಸ್ಪ್ರೆಶನ್ ಇರುವ ವಿಭಿನ್ನ ಮಿಮ್ ಸಾಕಷ್ಟು ಪ್ರಸಿದ್ಧವಾಗಿದೆ. ಐಪಿಎಲ್ ನ ಪ್ರಾಂಚೈಸಿ ಮುಂಬೈ ಇಂಡಿಯನ್ಸ್ ಸಹ ಐಪಿಎಲ್ ಟ್ರೋಫಿ ವಿನ್ ಆಗಿರುವ ಮಿಮ್ ಒಂದನ್ನು ಮಾಡಿ ಟ್ವೀಟ್ ಮಾಡಿದೆ.

ಸನ್ ರೈಸರ್ ಹೈದ್ರಾಬಾದ್ ಸಹ ತನ್ನ ಕ್ರಿಯಾಶೀಲತೆ ಪ್ರದರ್ಶಿಸುವಲ್ಲಿ ಹಿಂದೆ ಬಿದ್ದಿಲ್ಲ. ಕೆನ್ ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ಮಾಡಿ ಸಹ ಆಟಗಾರನೊಂದಿಗೆ ಕೈ ತಟ್ಟುವ ಮಿಮ್ ಒಂದನ್ನು ಟ್ವೀಟ್ ಮಾಡಿದೆ. ಇದೇ ರೀತಿ ಅಜಯ್ ದೇವಗನ್ ಅವರ ಒಂದು ಫೋಟೋ ಸಹ ಹರಿದಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...