alex Certify ಫನ್ನಿ ವಿಡಿಯೋ ಮೂಲಕ ಅಭಿಮಾನಿಗಳ ಮನಗೆದ್ದ​ ನಟಿ ಜಾನ್ವಿ ಕಪೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫನ್ನಿ ವಿಡಿಯೋ ಮೂಲಕ ಅಭಿಮಾನಿಗಳ ಮನಗೆದ್ದ​ ನಟಿ ಜಾನ್ವಿ ಕಪೂರ್​

ಬಾಲಿವುಡ್​ ನಟಿ ಜಾನ್ವಿ ಕಪೂರ್​ ತಮ್ಮ ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಜಾಲತಾಣದ ಮೂಲಕವೂ ಸದಾ ಸುದ್ದಿಯಾಗುತ್ತಲೇ ಇರ್ತಾರೆ. ಇನ್​ಸ್ಟಾಗ್ರಾಂನ ರೀಲ್ಸ್ ವಿಡಿಯೋ ಮೂಲಕ ಜಾನ್ವಿ ಕಪೂರ್ ಅಭಿಮಾನಿಗಳನ್ನ ರಂಜಿಸುತ್ತಲೇ ಇರ್ತಾರೆ.

2005ರಲ್ಲಿ ತೆರೆಕಂಡ ʼಬಂಟಿ ಔರ್​ ಬಬ್ಲಿʼ ಸಿನಿಮಾದ ʼಕಜ್ರಾ ರೆʼ ಹಾಡಿಗೆ ಅಭಿನಯಿಸಿರುವ ಜಾನ್ವಿ ಕಪೂರ್ ಈ ವಿಡಿಯೋಗೆ ಫನ್ನಿ ಶೀರ್ಷಿಕೆ ನೀಡಿದ್ದಾರೆ. ಒಂದು ವೇಳೆ ಫಿಲಂಫೇರ್​ ಅವಾರ್ಡ್ ದಿನವೇ ನಿಮಗೆ ನೀವು ವಿನ್ಯಾಸಗೊಳಿಸಿದ ಡ್ರೆಸ್​ ಫಿಟ್​ ಆಗುತ್ತಿಲ್ಲ ಎಂಬ ವಿಚಾರ ತಿಳಿದಾಗ…..ಎಂದು ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋದಲ್ಲಿ ಜಾನ್ವಿ ಬಳಿ ಬಣ್ಣದ ಕ್ರಾಪ್​ ಟಾಪ್​ ಹಾಗೂ ಡೆನಿಮ್​ ಶಾರ್ಟ್ಸ್​ ಧರಿಸಿದ್ದಾರೆ. ಈ ಫನ್ನಿ ವಿಡಿಯೋ ಜಾನ್ವಿ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಮೊನ್ನೆಯಷ್ಟೇ ಜಾನ್ವಿ ಪೂಲ್​ ಒಂದರ ಎದುರು ತನ್ನ ಸ್ನೇಹಿತೆಯ ಜೊತೆ ನೃತ್ಯ ಮಾಡಿದ್ದರು. ಈ ವಿಡಿಯೋ ಕೂಡ ಸಾಕಷ್ಟು ವೀವ್ಸ್ ಗಳಿಸಿತ್ತು.

View this post on Instagram

A post shared by Janhvi Kapoor (@janhvikapoor)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...