ಬಹಳ ದೊಡ್ಡ ಅಭಿಮಾನಿಗಳ ಬಳಗ ಹೊಂದಿರುವ ಸ್ಯಾಂಡಲ್‌ವುಡ್‌ನ ಅಗ್ರ ತಾರೆ ದರ್ಶನ್ ತೂಗುದೀಪ ಕನ್ನಡ ಚಿತ್ರೋದ್ಯಮದಲ್ಲಿ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಲೇ ಬಂದಿದ್ದಾರೆ.
ದರ್ಶನ್‌ಗೆ ಲಾಯಲ್ ಅಭಿಮಾನಿಗಳ ಕ್ಲಬ್‌ಗಳು ಬಹಳಷ್ಟಿದ್ದು, ಇವುಗಳೊಂದಿಗೆ ಖುದ್ದು ದರ್ಶನ್ ಅವರೇ ಬಹಳಷ್ಟು ಬಾರಿ ಸಂವಹನ ಮಾಡುತ್ತಾ ಬಂದಿದ್ದಾರೆ. ತಮ್ಮ ಅಭಿಮಾನಿಗಳ ಆನ್ಲೈನ್ ಕ್ಲಬ್ ’ಡಿ ಕಂಪನಿ’ಯಲ್ಲಿ ವೈಯಕ್ತಿಕ ಆಸಕ್ತಿ ಹೊಂದಿರುವ ದರ್ಶನ್ ಖುದ್ದು ತಾವೂ ಸಹ ಆ ಡಿ ಕಂಪನಿಯ ಹುಡುಗರಲ್ಲಿ ಒಬ್ಬರು ಎನ್ನುತ್ತಾರೆ.
65 ಮಿಲಿಯನ್ ವೀಕ್ಷಣೆ ಪಡೆದ ‘ರಾಬರ್ಟ್’ ಚಿತ್ರದ ‘ಕಣ್ಣು ಹೊಡಿಯಾಕ’ ವಿಡಿಯೋ ಸಾಂಗ್
“ನಾನೂ ಸಹ ಡಿ ಕಂಪನಿಯ ಹುಡುಗರಲ್ಲಿ ಒಬ್ಬ. ಅವರೆಲ್ಲಾ ನನ್ನ ಮೇಲೆ ತೋರುವ ಪ್ರೀತಿಗೆ ನಾನು ಚಿರಋಣಿ. ನಾವು ಪ್ರತಿನಿತ್ಯ ಭೇಟಿಯಾಗಲು ಸಾಧ್ಯವಾಗದೇ ಇರಬಹುದು, ಆದರೆ ಅವರು ನನ್ನ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ನನ್ನನ್ನು ಗೌರವಿಸುತ್ತಾರೆ. ನನಗೆ ಬಿಡುವಾದ ವೇಳೆ ಸ್ವಲ್ಪ ಹೊತ್ತು ಮಾತನಾಡಬೇಕೆಂಬ ಆಸೆಯಿಂದ ನನಗೆ ಒಂದಷ್ಟು ಸಂದೇಶಗಳನ್ನು ಅಭಿಮಾನಿಗಳು ಆನ್ಲೈನ್‌ನಲ್ಲಿ ಕಳುಹಿಸುತ್ತಾರೆ” ಎನ್ನುತ್ತಾರೆ ದರ್ಶನ್.
ಬಹುತೇಕ ಪುರುಷರು ಗೂಗಲ್ ನಲ್ಲಿ ಸರ್ಚ್ ಮಾಡ್ತಾರೆ ಈ ವಿಷ್ಯ..!
ತಮ್ಮ ಚಿತ್ರಗಳ ಬಗ್ಗೆ ಮಾತನಾಡಿದ ದರ್ಶನ್, “ಸಿನೆಮಾಗಳನ್ನು ಯಾವುದೇ ನಿರೀಕ್ಷೆಗಳಿಲ್ಲದೇ ಬಂದು ವೀಕ್ಷಿಸಿ. ಈ ವಿಚಾರವನ್ನು ಯಾರಾದರೂ ಒಪ್ಪುವರೋ ಅಥವಾ ಹೇಳುವರೋ ನನಗೆ ಗೊತ್ತಿಲ್ಲ, ಆದರೆ ನನ್ನ ಮಾರ್ಕೆಟ್ ಮೂರು ದಿನಗಳು ಮಾತ್ರ. ಬಾಕ್ಸ್‌ಆಫೀಸ್‌ನಲ್ಲಿ ನನ್ನ ಪ್ರಭಾವದಿಂದ ಮೂರು ದಿನಗಳ ಮಟ್ಟಿಗೆ ಮಾತ್ರವೇ ಜನರು ಬರುತ್ತಾರೆ, ಇದಾದ ಮೇಲೆ ಕಥೆಯ ಮೇಲೆ ಎಲ್ಲಾ ನಿಂತಿರುತ್ತದೆ. ಸ್ಟಾರ್ ಯಾರೇ ಆಗಿದ್ದರೂ, ಆತನ ಮುಖಮೌಲ್ಯ ಬರೀ ಮೂರು ದಿನಗಳು ಮಾತ್ರ — ಶುಕ್ರವಾರ, ಶನಿವಾರ, ಭಾನುವಾರ” ಎಂದಿದ್ದಾರೆ.