alex Certify 3 ವರ್ಷ ವಯಸ್ಸಿನಲ್ಲೇ 50ಕ್ಕೂ ಹೆಚ್ಚು ಹಾಡನ್ನ ಹೇಳ್ತಾಳೆ ಈ ಪೋರಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ವರ್ಷ ವಯಸ್ಸಿನಲ್ಲೇ 50ಕ್ಕೂ ಹೆಚ್ಚು ಹಾಡನ್ನ ಹೇಳ್ತಾಳೆ ಈ ಪೋರಿ..!

ಪಶ್ಚಿಮ ಬಂಗಾಳದ ಮಿಡ್ನಾಪುರ ಜಿಲ್ಲೆಯ ಮೂರೂವರೆ ವರ್ಷದ ಬಾಲಕಿ ಬಂಗಾಳಿ, ಹಿಂದಿ ಹಾಗೂ ಇಂಗ್ಲೀಷ್​​ನಲ್ಲಿ 50 ಕವನವನ್ನ ನೋಡದೇ ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ಇದು ಮಾತ್ರವಲ್ಲದೇ ಆರತ್ರಿಕಾ ಘೋಷ್ 20ಕ್ಕೂ ಹೆಚ್ಚು​​ ರವೀಂದ್ರ ಸಂಗೀತ್​, ಜಾನಪದ ಗೀತೆ, ಭಕ್ತಿ ಗೀತೆ ಹಾಗೂ ಸಿನಿಮಾ ಹಾಡುಗಳನ್ನ ಹಾಡುತ್ತಾಳೆ. ಈ ಸಾಧನೆಯ ಮೂಲಕ ಈ ಪುಟ್ಟ ಬಾಲಕಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ತನ್ನ ಹೆಸರನ್ನ ನೋಂದಾಯಿಸಿದ್ದಾಳೆ.

ಬಾಲಕಿಯ ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ ಮೇ 15ರಂದು ಇಂಡಿಯಾ ಬುಕ್ ಆಫ್​ ರೆರ್ಕಾರ್ಡ್ಸ್​ನಲ್ಲಿ ತನ್ನ ಹೆಸರನ್ನ ನೋಂದಾಯಿಸಿದ್ದಾಳೆ. ಹಾಗೂ ಜೂನ್​ 19ರಂದು ಅಧಿಕಾರಿಗಳು ಈಕೆಯ ಮನೆಗೆ ಬಂದು ಪ್ರಮಾಣ ಪತ್ರ ಹಾಗೂ ಪ್ರಶಸ್ತಿಗಳನ್ನ ನೀಡಿದ್ದಾರೆ. ಆರತ್ರಿಕಾ ತಂದೆ ಸುಧಾಕರ್​ ಘೋಷ್​​ ಶಾಲಾ ಶಿಕ್ಷಕರಾಗಿದ್ದರೆ ತಾಯಿ ತನುಶ್ರೀ ಘೋಷ್​​​ ಗೃಹಿಣಿ ಆಗಿದ್ದಾರೆ.

ಮಗಳ ಸಾಧನೆಯ ಬಗ್ಗೆ ಮಾತನಾಡಿರುವ ಸುಧಾಕರ್​, ತಮ್ಮ ಮಗಳಿಗೆ ಉತ್ತಮ ನೆನಪಿನ ಶಕ್ತಿ ಇದೆ. ಈಕೆಗೆ 2 ವರ್ಷ ಪ್ರಾಯದವಳಾಗಿದ್ದಾಗಿನಿಂದಲೇ ಕುಟುಂಬಸ್ಥರ ಎಲ್ಲರ ಹೆಸರನ್ನೂ ನೆನಪಿನಲ್ಲಿ ಇಟ್ಟುಕೊಳ್ತಿದ್ದಳು. ಇದಾದ ಬಳಿಕ ಆಕೆಯ ಪ್ರತಿಭೆಯನ್ನ ಗಮನಿಸಿ ನಾವು ಈ ಸಾಧನೆ ಮಾಡಲು ಪ್ರೇರಣೆ ನೀಡಿದ್ದೇವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...