alex Certify ‌ʼಮಸ್ತ್‌ ಕಲಂದರ್ʼ‌ ಹಾಡಿನ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಮಸ್ತ್‌ ಕಲಂದರ್ʼ‌ ಹಾಡಿನ ಹಳೆ ವಿಡಿಯೋ ಮತ್ತೆ ವೈರಲ್

Watch: Old Video of British Singer Soulfully Singing Sufi Song in Streets of Dubai Goes Viral Again

ಸಂಗೀತಕ್ಕೆ ಯಾವುದೇ ಪರಿಧಿಯಿಲ್ಲ. ಅದಕ್ಕೆ ಇದೇ ಭಾಷೆ, ಇಂತದ್ದೇ ಜನರು ಬೇಕು ಅನ್ನೋದು ಇಲ್ಲ. ಸಾಮಾಜಿಕ ಜಾಲತಾಣದ ಮೂಲಕ ಇಡೀ ವಿಶ್ವವೇ ಸಂಪರ್ಕದಲ್ಲಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ದೂರದ ದುಬೈನಲ್ಲಿ ಸೂಫಿ ಗಾಯನವೊಂದು ಹಲ್​ಚಲ್​ ಸೃಷ್ಟಿಸಿದ ವಿಡಿಯೋ ಎರಡನೇ ಬಾರಿಗೆ ವೈರಲ್​ ಆಗಿದೆ.

ಬ್ರಿಟಿಷ್​ ಮೂಲದ ಸಂಗೀತಗಾರ್ತಿ ಮತ್ತಾಕೆಯ ಸ್ನೇಹಿತೆ ದುಬೈ ಬೀದಿಯಲ್ಲಿ ‘ದಮಾ ದಮ್​ ಮಸ್ತ್​ ಕಲಂದಂರ್​’ ಎಂಬ ಹಾಡನ್ನ ಹಾಡಿದ್ರು. ಈ ದೃಶ್ಯವನ್ನ 2017ರಲ್ಲೇ ಯಾರೋ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಂತೆ ತುಂಬಾ ಜನರ ಮೆಚ್ಚುಗೆಗೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಈ ವಿಡಿಯೋ ವೈರಲ್​ ಆಗಿದೆ.

ಭಾರತೀಯ ಸೇನೆಯ ಲೆ. ಜನರಲ್​ ಕೆಜೆಎಸ್​ ಧಿಲ್ಲೋನ್​ ಭಾನುವಾರ ಈ ಮೂರು ವರ್ಷದ ಹಿಂದಿನ ವಿಡಿಯೋವನ್ನ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಅಲ್ಲದೇ ಧಮಾದಮ್​ ಮಸ್ತ್​ ಕಲಂದಂರ್​ ಹಾಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡ್ತಿದೆ ಅಂತಾ ಕ್ಯಾಪ್ಶನ್​ ಸಹ ಕೊಟ್ಟಿದ್ರು. ಧಿಲ್ಲೋನ್​ರ ಟ್ವೀಟ್​ ಬಳಿಕ ಈ ವಿಡಿಯೋಗೆ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಜೀವ ಬಂದಂತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...