alex Certify ಲಿಟಲ್ ಸ್ಟಾರ್ ಡಾನ್ಸ್ ಗೆ ಹೃತಿಕ್ ರೋಷನ್ ಫಿದಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಟಲ್ ಸ್ಟಾರ್ ಡಾನ್ಸ್ ಗೆ ಹೃತಿಕ್ ರೋಷನ್ ಫಿದಾ…!

ಸ್ವತಃ ಒಳ್ಳೇ ಡ್ಯಾನ್ಸರ್ ಆಗಿರುವ ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಕಲೆಯನ್ನು ಆರಾಧಿಸುವ ಹಾಗೂ ಗುರುತಿಸಿ ಹೊಗಳುವ ಕಾರ್ಯವನ್ನು ಆಗಾಗ ಮಾಡುತ್ತಿರುತ್ತಾರೆ.

ಈಗ ಅವರ ಫ್ಯಾನ್ ಕ್ಲಬ್ ನಲ್ಲಿ ಅಭಿಮಾನಿಯೊಬ್ಬರು ಬಾಲಕಿಯೊಬ್ಬಳು ಹೃತಿಕ್ ಹಾಡಿಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಅದನ್ನು ಹೃತಿಕ್ ಷೇರ್ ಮಾಡಿ ಹೊಗಳಿದ್ದಾರೆ.

ಜೈ ಜೈ ಶಿವಶಂಕರ್ ಎಂಬ ಹಾಡಿಗೆ ಪುಟ್ಟ ಬಾಲಕಿ ಹೆಜ್ಜೆ ಹಾಕಿದ್ದು, ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾಳೆ. ಈ ವಿಡಿಯೋವನ್ನು ತನ್ನ ಫ್ಯಾನ್ ಕ್ಲಬ್ ನಲ್ಲಿ ಗಮನಿಸಿದ ಹೃತಿಕ್ ಅದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ವಾಟ್ ಎ ಸ್ಟಾರ್ ಲವ್ ! ಎಂಬ ಅಡಿಬರಹವನ್ನೂ ಹಾಕಿದ್ದಾರೆ. ಅವರು ವಿಡಿಯೋ ಅಪ್ಲೋಡ್ ಮಾಡುತ್ತಿದ್ದಂತೆ ವೈರಲ್ ಆಗಿದೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿದ ಒಂದೇ ದಿನದಲ್ಲಿ 25.1k ಮಂದಿ ವೀಕ್ಷಿಸಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಹೃತಿಕ್ ರೋಷನ್ ಅವರು ಮಾಜಿ ಪತ್ನಿ ಸುಸೈನೆ ಖಾನ್ ಹಾಗೂ ಮಕ್ಕಳ ಜೊತೆ ಸೆಲ್ಫ್ ಕ್ವಾರಂಟೇನ್ ನಲ್ಲಿದ್ದಾರೆ.

— Hrithik Worshiper (@iPrasenjit_M) June 12, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...