alex Certify ಚಿತ್ರೀಕರಣ ವೇಳೆ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಟ ವಿಶಾಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರೀಕರಣ ವೇಳೆ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಟ ವಿಶಾಲ್

ನಟ ವಿಶಾಲ್ ಅವರು ಚಿತ್ರೀಕರಣ ಸಂದರ್ಭದಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಶೂಟಿಂಗ್ ವೇಳೆ ನೆಲದ ಮೇಲೆ ಅವರು ಮಲಗಿದ್ದು, ಪಕ್ಕದಲ್ಲೇ ಟ್ರಕ್ ಹಾದು ಹೋಗಿದೆ. ಅದೃಷ್ಟವಶಾತ್ ವಿಶಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

‘ಮಾರ್ಕ್ ಆಂಟೋನಿ’ ಸೆಟ್‌ನಲ್ಲಿ ವೇಗವಾಗಿ ಬಂದ ಟ್ರಕ್‌ನಿಂದ ವಿಶಾಲ್ ತಪ್ಪಿಸಿಕೊಂಡಿದ್ದಾರೆ. ಕೆಲವೇ ಸೆಕೆಂಡುಗಳು ಮತ್ತು ಕೆಲವು ಇಂಚುಗಳಲ್ಲಿ ನನ್ನ ಜೀವನವನ್ನು ಉಳಿಸಿಕೊಂಡೆ. ಸರ್ವಶಕ್ತನಿಗೆ ಧನ್ಯವಾದಗಳು. ಈ ಘಟನೆಯಿಂದ ನಡುಕವಾದರೂ ಚಿತ್ರೀಕರಣಕ್ಕೆ ಹಿಂತಿರುಗಿದೆ ಎಂದು ವಿಶಾಲ್ ಹೇಳಿದ್ದಾರೆ.

ಚಿತ್ರೀಕರಣದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ವೇಗವಾಗಿ ನುಗ್ಗಿದೆ. ನೆಲದ ಮೇಲೆ ಮಲಗಿದ್ದ ವಿಶಾಲ್ ಪಾರಾಗಿದ್ದು, ಸುತ್ತಲೂ ಇದ್ದ ಕಿರಿಯ ಕಲಾವಿದರು ಕೂಡ ಅಪ್ಪಳಿಸಲು ಬಂದಿದ್ದ ವಾಹನದಿಂದ ಅದೃಷ್ಟವಶಾತ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿದೆ ಎನ್ನಲಾಗಿದ್ದು, ಈ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...