alex Certify ‘ದಬಾಂಗ್’ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದಬಾಂಗ್’ ಖ್ಯಾತಿಯ ಸಂಗೀತ ನಿರ್ದೇಶಕ ವಾಜಿದ್ ಖಾನ್ ಇನ್ನಿಲ್ಲ

ಮುಂಬೈ: ಸಾಜಿದ್-ವಾಜಿದ್ ಖ್ಯಾತಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ವಾಜಿದ್ ಖಾನ್ ನಿಧನರಾಗಿದ್ದಾರೆ. ಮುಂಬೈನ ಚೆಂಬೂರು ಸುರಾನಾ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ‘ವಾಂಟೆಡ್’ ‘ದಬಾಂಗ್’ ಡಬಲ್ ಮತ್ತು ‘ಏಕ್ ಥಾ ಟೈಗರ್’ ಚಿತ್ರಗಳ ಸಂಗೀತ ಸಂಯೋಜಕರಾಗಿರುವ ಸಾಜಿದ್-ವಾಜಿದ್ ಹಲವಾರು ಬಾಲಿವುಡ್ ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಸೋಮವಾರ ಬೆಳಗಿನಜಾವ ಮೂತ್ರಪಿಂಡ ಸೋಂಕಿನಿಂದ ಉಂಟಾದ ತೊಂದರೆಯಿಂದ ವಾಜಿದ್ ಖಾನ್ ಮೃತಪಟ್ಟಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಕೆಲವು ತಿಂಗಳ ಹಿಂದೆ ಅವರಿಗೆ ಮೂತ್ರಪಿಂಡ ಕಸಿ ಮಾಡಲಾಗಿದ್ದು, ಮೂತ್ರಪಿಂಡ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ಸೇರಿದ್ದ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

1998 ರಲ್ಲಿ ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ಸಾಜಿದ್-ವಾಜಿದ್ ಹಲವಾರು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ವಾಜಿದ್ ಖಾನ್ ಗಾಯಕರಾಗಿಯೂ ಗಮನಸೆಳೆದಿದ್ದು ‘ರೌಡಿ ರಾಥೋಡ್’ ಚಿತ್ರದ ಚಿಂತಾ ತಾ ಚಿತಾ ಚಿತಾ ಹಾಡಿಗೆ ದನಿಗೂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...